ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬಾಗಲಕೋಟೆ : ವೇದಿಕೆ ಮೇಲೆ ಮುರುಗೇಶ್ ನಿರಾಣಿ-ನಾಡಗೌಡ ಜಟಾಪಟಿ

ಬಾಗಲಕೋಟೆ : ಸಚಿವ ಮುರುಗೇಶ್ ನಿರಾಣಿ ಭಾಷಣವನ್ನು ವೇದಿಕೆ ಮೇಲೆಯೇ ತಡೆದ ಬಿಜೆಪಿ ಮುಖಂಡ ನಾಡಗೌಡ ತನ್ನ ಅಭಿಪ್ರಾಯ ತಿಳಿಸಿದ ಘಟನೆ ಬಾಗಲಕೋಟೆ ಜಿಲ್ಲೆ ಬಾದಾಮಿ ತಾಲ್ಲೂಕಿನ ಅಗಸನಕೊಪ್ಪ ಗ್ರಾಮದಲ್ಲಿ ನಡೆದ ಕಾರ್ಯಕ್ರಮದಲ್ಲಿ ನಡೆದಿದೆ.

ಹೆರಕಲ್ ಏತ ನೀರಾವರಿ ಕಾಲುವೆ ಕಾಮಗಾರಿ ಭೂಮಿ ಪೂಜೆ ಕಾರ್ಯಕ್ರಮದಲ್ಲಿ ರೈತರ ಪಂಪ್ ಶೆಟ್ ಗೆ ವಿದ್ಯುತ್ ಸೌಲಭ್ಯ ಬಗ್ಗೆ ಭಾಷಣದ ಮಧ್ಯೆ ಎದ್ದ ನಾಡಗೌಡ ರೈತರ ಹೊಲ ಹಾಳಾಗೋದಕ್ಕೆ ನೀವೆ ಕಾರಣ ನಮಗೆ ಹಗಲು 12 ತಾಸು ಕರೆಂಟ್ ಕೊಡಿ ನಾವು ಹಗಲು ಪೂರ್ತಿ ನೀರು ಹರಿಸುತ್ತೇವೆ ರಾತ್ರಿ ಕರೆಂಟ್ ಕೊಡದರಿಂದ ಹೊಲಕ್ಕೆ ನೀರು ಹರಿಸಿ ಮನೆಗೆ ಬರುತ್ತಾರೆ. ಇಲ್ಲಿ ನೀರಿನ ಹರಿವಿನ ಪ್ರಮಾಣ ಹೆಚ್ಚಾಗಿ ಭೂಮಿ ಸವಳು ಜವಳಾಗುತ್ತದೆ ಎಂದಿದ್ದಾರೆ.

ಇದೇ ಮಾತಿಗೆ ಉತ್ತರಿಸಿದ ನಿರಾಣಿ ನೀವು ಅಂದುಕೊಂಡಷ್ಟು ಸುಲಭವಲ್ಲ. ಎಲ್ಲರೂ ಕರೆಕ್ಟ್ ಆಗಿ ಬಿಲ್ ಕಟ್ಟಿದರೆ ನಾವು 24 ತಾಸು ಕರೆಂಟ್ ಕೊಡಲು ಸಿದ್ದ ಎಂದಿದ್ದಾರೆ.

Edited By : Manjunath H D
PublicNext

PublicNext

30/01/2022 06:21 pm

Cinque Terre

84.82 K

Cinque Terre

1

ಸಂಬಂಧಿತ ಸುದ್ದಿ