ಹುಬ್ಬಳ್ಳಿ: ನನ್ನನ್ನು ನೀವು ಬೆಳೆಸಿದ್ದಿರಿ, ಇನ್ನುಮುಂದೆ ನೀವೆ ಕೈ ಹಿಡಿಯಬೇಕು ಎಂದು ಮಾಧ್ಯಮದ ಎದುರು ಭಾವಕರಾಗಿ ವಿಧಾನ ಪರಿಷತ್ ಸದಸ್ಯ ಸಿಎಂ ಇಬ್ರಾಹಿಂ ಕಣ್ಣೀರು ಹಾಕಿದರು.
ನಗರದಲ್ಲಿಂದು ಮಾತನಾಡಿದ ಅವರು, ಪಕ್ಷದಿಂದ ಹೊರಬಂದಿದ್ದೇನೆ. ವಾಪಸ್ ಹೋಗುವ ಪ್ರಶ್ನೆಯೇ ಇಲ್ಲ. ಮುಂದಿನ ದಾರಿ ನೋಡೋಣ. ನನ್ನ ಶಾಪ ಭಾರಿ ಕೆಟ್ಟದ್ದು,ಇವಾಗ ತಟ್ಟುತ್ತಿದೆ. ನಾನು ವಿಷಕಂಠ ಇದ್ದಂಗೆ ಎಲ್ಲವೂ ನುಂಗಿಕೊಂಡು ಇದ್ದೆ. ನಂಗೆ ಎಂಎಲ್ ಸಿ ಮಾಡಿದ್ದೆ ಅಂತ ಸಿದ್ದರಾಮಯ್ಯ ಹೇಳ್ತಾರೆ.ನಾಳೆನೇ ರಾಜಿನಾಮೆ ಕೊಡ್ತಿನಿ ಎಂದರು.
ಸಿದ್ದರಾಮಯ್ಯ ಅವರು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಸ್ಪರ್ಧೆ ಮಾಡಲಿ. ಯಾರು ಗೆಲ್ಲುತ್ತಾರೆ ನೋಡೋಣ ಎಂದು ಬಹಿರಂಗ ಸವಾಲು ಹಾಕಿದರು.
ಡಿಕೆಶಿ ಬಹಳ ದೊಡ್ಡವರು ನಮ್ಮಂತವರನೆಲ್ಲಾ ಯಾಕೆ ಮಾತನಾಡಿಸುತ್ತಾರೆ. ಆರು ತಿಂಗಳ ಹಿಂದೆ ಎಲ್ಲವೂ ಸರಿ ಮಾಡ್ತೀನಿ ಅಂದ್ರೂ. ಆದರೆ ಏನು ಆಗಿಲ್ಲ ಎಂದು ಡಿಕೆ ಶಿವಕುಮಾರು ಹಾಗೂ ಸಿದ್ದರಾಮಯಗಯ ವಿರುದ್ದ ಇಬ್ರಾಹಿಂ ವಾಗ್ದಾಳಿ ನಡೆಸಿದರು.
ಇವತ್ತು ಎಸ್.ಆರ್.ಪಾಟೀಲ್ ಬೇಟಿಯಾಗ್ತಾರೆ.ಏನ್ ಆಗುತ್ತದೆ ನೋಡೋಣ. ನಮ್ಮ ಜೊತೆ ಯಾರ ಬರುತ್ತಾರೋ ಅವರನ್ನು ಕರೆದುಕೊಂಡು ಹೋಗುತ್ತೇನೆ.ಇಲ್ಲಿ ಅಲಿಂಗ ಮಾಡುತ್ತೇನೆ (ಅಲ್ಪಸಂಖ್ಯಾತ-ಲಿಂಗಾಯತರು) ಅಲ್ಲಿ ಅಗೌ (ಗೌಡ-ಅಲ್ಪಸಂಖ್ಯಾತರು) ಮಾಡುತ್ತೇನೆ ಸಿದ್ದರಾಮಯ್ಯ ಅವರ ಅಹಿಂದಕ್ಕೆ ಟಕ್ಕರ್ ಕೊಟ್ಟರು.
ಸಂಜೆ ನಾಲ್ಕು ಗಂಟೆಗೆ ಸಿ.ಎಂ ಇಬ್ರಾಹಿಂ ಹಾಗೂ ಎಸ್ ಆರ್ ಪಾಟೀಲ್ ಭೇಟಿಯಾಗಲಿದ್ದಾರೆ. ನಗರದ ಖಾಸಗಿ ಹೋಟೆಲ್ ನಲ್ಲಿ ಉಭಯ ನಾಯಕರು ಭಾಗಿಯಾಗಲಿದ್ದು, ಇದು ಸಾಕಷ್ಟು ಕೂತುಹಲ ಕೆರಳಿಸಿದ್ದು, ಪಕ್ಷದಲ್ಲಾದ ಅನ್ಯಾಯ, ಮುಂದಿನ ನಡೆಗಳ ಕುರಿತು ಚರ್ಚಿಸುವ ಸಾಧ್ಯತೆ ಹೆಚ್ಚಿದೆ.
PublicNext
30/01/2022 03:48 pm