ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಎಲೆಕ್ಷನ್ ಗಾಗಿ ಸರ್ಕಸ್ : 227ನೇ ಬಾರಿಗೆ ನಾಮಪತ್ರ ಸಲ್ಲಿಕೆ ಈ ಬಾರಿಯಾದ್ರು ಗೆಲ್ಲುತ್ತಾರಾ?..

ಕೊಯಮತ್ತೂರು : ಕೆಲವರಿಗೆ ಯಾವುದೇ ವಿಚಾರದಲ್ಲಾಗಲಿ ಗೆಲ್ಲುವವರೆಗೂ ಸಮಾಧಾನವೇ ಇರಲ್ಲಾ. ಇಲ್ಲೊಬ್ಬ ವ್ಯಕ್ತಿ ಚುನಾವಣೆಯಲ್ಲಿ ಗೆಲ್ಲಲು ಬರೋಬ್ಬರಿ 227 ಬಾರಿಗೆ ನಾಮಪತ್ರ ಸಲ್ಲಿಸಿದ್ದಾರೆ. ಸರಣಿ ನಾಮ ಪತ್ರ ಸಲ್ಲಿಸುವುದರಿಂದಲೇ ಈ ವ್ಯಕ್ತಿಗೆ ‘ಎಲೆಕ್ಷನ್ ಕಿಂಗ್’ ಎಂದು ಪ್ರಖ್ಯಾತಿ ಪಡೆದಿದ್ದಾರೆ. ಹೌದು ಕೆ ಪದ್ಮರಾಜನ್ ಅವರು 227ನೇ ಬಾರಿಗೆ ಫೆಬ್ರವರಿ 19 ರಂದು ನಡೆಯಲಿರುವ ಸ್ಥಳೀಯ ಸಂಸ್ಥೆ ಚುನಾವಣೆಗೆ ನಾಮಪತ್ರ ಸಲ್ಲಿಸಿದ್ದಾರೆ.

ಈಗಾಗಲೇ ಹೆಚ್ಚಿನ ಸಂಖ್ಯೆಯ ಸ್ಪರ್ಧೆಗಳೊಂದಿಗೆ, ಪದ್ಮರಾಜನ್ ಅವರು ಅತ್ಯಂತ ವಿಫಲ ಅಭ್ಯರ್ಥಿಯಾಗಿ ದಾಖಲೆ ಪುಸ್ತಕಗಳಲ್ಲಿ ಸ್ಥಾನ ಪಡೆಡಿದ್ದಾರೆ. ಟೈರ್ ವ್ಯವಹಾರದಲ್ಲಿ, ಪದ್ಮರಾಜನ್ ಮೊದಲು 1986 ರಲ್ಲಿ ಮೆಟ್ಟೂರಿನಿಂದ ಸ್ವತಂತ್ರವಾಗಿ ಸ್ಪರ್ಧಿಸಿದ್ದರು ಬಳಿಕ ಅವರು ಅಟಲ್ ಬಿಹಾರಿ ವಾಜಪೇಯಿ (ಲಖನೌ), ಮನಮೋಹನ್ ಸಿಂಗ್, ಪಿವಿ ನರಸಿಂಹ ರಾವ್ (ನಂದ್ಯಾಲ್), ಪ್ರಣಬ್ ಮುಖರ್ಜಿ, ಪ್ರತಿಭಾ ಪಾಟೀಲ್, ಕೆಆರ್ ನಾರಾಯಣನ್ ಮತ್ತು ಎಪಿಜೆ ಅಬ್ದುಲ್ ಕಲಾಂ ವಿರುದ್ಧವೂ ಸ್ಪರ್ಧಿಸಿದರು.

62 ವರ್ಷದ ಪದ್ಮರಾಜನ್ ಈಗ ವೆರಕಲ್ಪುದೂರ್ (ವಾರ್ಡ್-2) ನಿಂದ ಸ್ಪರ್ಧಿಸುತ್ತಿದ್ದಾರೆ..!

Edited By : Nirmala Aralikatti
PublicNext

PublicNext

29/01/2022 10:20 pm

Cinque Terre

62.35 K

Cinque Terre

0

ಸಂಬಂಧಿತ ಸುದ್ದಿ