ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

'ಬಿಎಸ್‌ವೈ ಸಾಹೇಬ್ರು ಇಷ್ಟು ಕಣ್ಣೀರಿಟ್ಟಿದ್ದು ನೋಡಿರಲಿಲ್ಲ': ಕಂಬನಿಮಿಡಿದ ಸಿಬ್ಬಂದಿ

ಬೆಂಗಳೂರು: ಮಾಜಿ ಸಿಎಂ ಬಿ.ಎಸ್‌. ಯಡಿಯೂರಪ್ಪ ಅವರು ಮೊಮ್ಮಗಳ ಅಗಲಿಕೆಯಿಂದ ಭಾರಿ ಆಘಾತಕ್ಕೆ ಒಳಗಾಗಿದ್ದಾರೆ. ಅವರು ಕಣ್ಣೀರಿಟ್ಟಿದ್ದನ್ನು ಕಂಡು ಕಾವೇರಿಯಲ್ಲಿ ಇರುವ ಉದ್ಯೋಗಿಗಳು ಕಂಬನಿಮಿಡಿದಿದ್ದಾರೆ.

"ಪಾಪ ಸಾಹೇಬ್ರು ತುಂಬಾನೆ ಅತ್ತು ಬಿಟ್ಟರು. ಅವರು ಕಣ್ಣೀರು ಹಾಕಿದ್ದೇ ನೋಡಿರಲಿಲ್ಲ. ಈ ರೀತಿ ಬಿಕ್ಕಿ ಬಿಕ್ಕಿ ಅತ್ತಿದ್ದು ಇದೇ ಮೊದಲು. ಎಲ್ಲರಿಗೂ ಅಯ್ಯೋ ಅನ್ನಿಸಿಬಿಡ್ತು" ಎಂದು ಕಾವೇರಿ ನಿವಾಸದ ಉದ್ಯೋಗಿಗಳು ನೋವು ತೋಡಿಕೊಂಡಿದ್ದಾರೆ.

ಬಿ.ಎಸ್‌. ಯಡಿಯೂರಪ್ಪ ಅವರು ಎಂಥ ವಿಷಮ‌ ಸ್ಥಿತಿಯಲ್ಲೂ ಧೃತಿಗೆಡದವರು. ಆದರೆ ಮೊಮ್ಮಗಳ ಸಾವಿನಿಂದ ಅಕ್ಷರಶಃ ಕುಸಿದು ಹೋಗಿದ್ದರು. ಎರಡು ದಿನ‌ ಹಿಂದಿನವರೆಗೂ ತಮ್ಮ ಜೊತೆಗಿದ್ದ ಮೊಮ್ಮಗಳು ಆತ್ಮಹತ್ಯೆ ಮಾಡಿಕೊಂಡ ಸುದ್ದಿ ಅವರನ್ನು ತೀವ್ರವಾಗಿ ಕಾಡುತ್ತಿದ್ದು, ಇಷ್ಟೊಂದು ದುಃಖಪಟ್ಟಿದ್ದನ್ನು ಇದುವರೆಗೆ ಯಾರೂ ನೋಡೇ ಇರಲಿಲ್ಲ ಎಂದು ಕಾವೇರಿ ನಿವಾಸದ ಉದ್ಯೋಗಿಗಳು ಹೇಳಿದ್ದಾರೆ.

ಡಾ. ಸೌಂದರ್ಯ ಅವರು ಆತ್ಮಹತ್ಯೆಗೆ ಮುನ್ನ ಆ ಮಗುವನ್ನು‌ ಒಮ್ಮೆ ನೆನೆಸಿಕೊಂಡರೆ ಈ ರೀತಿ ಮಾಡುತ್ತಿರಲಿಲ್ಲವೇನೋ? ಒಳ್ಳೆ ಗೊಂಬೆ ತರ ಇದ್ದ ಮಗುವನ್ನು ನೆನೆಸಿಕೊಂಡರೆ ಬೇಸರವಾಗುತ್ತದೆ. ಇತ್ತೀಚೆಗಂತೂ ಸಾಹೇಬ್ರು ಆ ಮಗುವಿನ‌ ಜೊತೆಗೆ ಇರುತ್ತಿದ್ದರು ಎಂದು ಸಿಬ್ಬಂದಿ ಬೇಸರ ತೋಡಿಕೊಂಡಿದ್ದಾರೆ.

Edited By : Vijay Kumar
PublicNext

PublicNext

29/01/2022 12:50 pm

Cinque Terre

48.42 K

Cinque Terre

6

ಸಂಬಂಧಿತ ಸುದ್ದಿ