ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನಾವು ಪಟೇಲರ ಪೂಜಾರಿಗಳು, ಅವರು ಜಿನ್ನಾ ಆರಾಧಕರು: ಯೋಗಿ ಆದಿತ್ಯನಾಥ್

ಲಖನೌ (ಉತ್ತರ ಪ್ರದೇಶ): ನಾವು ಸರ್ದಾರ್ ಪಟೇಲರ ಪೂಜಾರಿಗಳು, ಕಾಂಗ್ರೆಸ್‌ನವರು ಮಹಮ್ಮದ್ ಅಲಿ ಜಿನ್ನಾ ಆರಾಧಕರು ಎಂದು ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಹೇಳಿದ್ದಾರೆ.

ಉತ್ತರ ಪ್ರದೇಶದಲ್ಲಿ ಸದ್ಯ ಚುನಾವಣೆ ಕಾವು ದಿನಗಳೆದಂತೆ ಏರುತ್ತಿದೆ. ಈ ನಡುವೆ ರಾಜಕೀಯ ನಾಯಕರ ನಡುವೆ ಪರಸ್ಪರ ಟೀಕಾ ಪ್ರಹಾರಗಳು ಭುಗಿಲೆದ್ದಿವೆ. ಈ ನಡುವೆ ಸಿಎಂ ಯೋಗಿ ಆದಿತ್ಯನಾಥ್ ಮಾಡಿದ ಟ್ವೀಟ್ ಭಾರಿ ಸದ್ದು ಮಾಡಿದೆ. ಕಾಂಗ್ರೆಸ್ ನಾಯಕರನ್ನು ಕೆರಳಿಸಿದೆ.

ಅವರು (ಸಮಾಜವಾದಿ ಪಕ್ಷ) ಜಿನ್ನಾ ಆರಾಧಕರು, ಆದರೆ ನಾವು ಸರ್ದಾರ್‌ ವಲ್ಲಭಭಾಯಿ ಪಟೇಲ್‌ ಅವರ ಆರಾಧಕರು. ಪಾಕಿಸ್ತಾನ ಅವರಿಗೆ ಪ್ರಿಯವಾಗಿದೆ. ನಾವು ಭಾರತ ಮಾತೆಗಾಗಿ ನಮ್ಮ ಜೀವನವನ್ನು ತ್ಯಾಗ ಮಾಡುತ್ತೇವೆ ಎಂದು ಪಾಕಿಸ್ತಾನ ನಿರ್ಮಾತೃ ಮೊಹಮ್ಮದ್‌ ಆಲಿ ಜಿನ್ನಾರನ್ನು ಉಲ್ಲೇಖಿಸಿ ಯೋಗಿ ಆದಿತ್ಯನಾಥ್‌ ಟ್ವೀಟ್‌ ಮಾಡಿದ್ದಾರೆ.

Edited By : Nagaraj Tulugeri
PublicNext

PublicNext

28/01/2022 08:23 pm

Cinque Terre

119.37 K

Cinque Terre

40

ಸಂಬಂಧಿತ ಸುದ್ದಿ