ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಯೋಗಿ ಆದಿತ್ಯನಾಥ್ ಪ್ರಬಲ ಪ್ರತಿಪಕ್ಷ ನಾಯಕ ಆಗೋದನ್ನು ನಾನು ನೋಡಬೇಕು: ರಾಕೇಶ್ ಟಿಕಾಯತ್

ಬಿಜ್ನೋರ್: ಉತ್ತರ ಪ್ರದೇಶದ ಸಿಎಂ ಯೋಗಿ ಆದಿತ್ಯನಾಥ್ ಅವರು ಪ್ರಬಲ ಪ್ರತಿಪಕ್ಷದ ನಾಯಕ ಆಗಿರುವುದನ್ನು ನಾನು ನೋಡಬೇಕು ಎಂದು ರೈತ ಹೋರಾಟಗಾರ ರಾಕೇಶ್ ಟಿಕಾಯತ್ ಹೇಳಿದ್ದಾರೆ.

ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಪ್ರಜಾಪ್ರಭುತ್ವದಲ್ಲಿ ಪ್ರತಿಯೊಬ್ಬರೂ ತಮ್ಮ ಅಭಿಪ್ರಾಯ ವ್ಯಕ್ತಪಡಿಸುವ ಸ್ವಾತಂತ್ರ್ಯ ಹೊಂದಿರಬೇಕು. ಹಾಗೂ ಶಾಂತಿಯುತ ವಾತಾವರಣದಲ್ಲಿ ಚುನಾವಣೆಗಳು ನಡೆಯಬೇಕು. ಪ್ರತಿ ವ್ಯಕ್ತಿಗೂ ಅವರ ಆಯ್ಕೆಯಂತೆ ಮತ ಚಲಾಯಿಸಲು ಅವಕಾಶವಿದೆ ಎಂದು ಹೇಳಿದರು.

ಬುಧವಾರ ರಾಕೇಶ್ ಟಿಕಾಯತ್ ಬಿಜ್ನೋರ್ ಜಿಲ್ಲೆಯ ಹಲವು ಗ್ರಾಮಗಳಿಗೆ ತೆರಳಿ ಬಿಜೆಪಿ ಅಭ್ಯರ್ಥಿ ವಿರುದ್ಧ ಸ್ಪರ್ಧಿಸುವ ಅಭ್ಯರ್ಥಿಗೆ ಮತ ನೀಡುವಂತೆ ರೈತರಲ್ಲಿ ಮನವಿ ಮಾಡಿದರು. ಟಿಕ್ರಿ ಗ್ರಾಮದಲ್ಲಿ ಟಿಕಾಯತ್, ಬಿಜೆಪಿ ವಿರುದ್ಧ ಮತ ಹಾಕಿ ಹಾಗೂ ಸಮರ್ಥ ಅಭ್ಯರ್ಥಿಗಳನ್ನು ಆಯ್ಕೆ ಮಾಡುವಂತೆ ಸಿಖ್ ಸಮುದಾಯದ ರೈತರಿಗೆ ತಿಳಿಸಿದರು. ಮುಂಬರುವ ಪಂಚ ರಾಜ್ಯಗಳ ಚುನಾವಣೆಯಲ್ಲಿ ಯಾವುದೇ ಪಕ್ಷಕ್ಕೆ ತಮ್ಮ ಬೆಂಬಲ ನೀಡುವುದಿಲ್ಲ ಕೆಲದಿನಗಳ ಹಿಂದೆ ಟಿಕಾಯತ್​ ಸ್ಪಷ್ಟಪಡಿಸಿದ್ದರು. ಇದೇ ವೇಳೆ, ಪ್ರತಿಪಕ್ಷ ನಾಯಕನು ಬಲಶಾಲಿಯಾಗಿರಬೇಕು. ಆ ಸ್ಥಾನಕ್ಕೆ ಯೋಗಿಜಿ ಅವರಿಗಿಂತ ಸೂಕ್ತ ವ್ಯಕ್ತಿ ಇನ್ನೊಬ್ಬರಿಲ್ಲ ಎಂದು ಟಿಕಾಯತ್​ ವ್ಯಂಗ್ಯವಾಡಿದರು.

Edited By : Nagaraj Tulugeri
PublicNext

PublicNext

27/01/2022 04:38 pm

Cinque Terre

67.73 K

Cinque Terre

18

ಸಂಬಂಧಿತ ಸುದ್ದಿ