ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಗಣರಾಜ್ಯೋತ್ಸವ ಸಂಭ್ರಮ: ಗಮನ ಸೆಳೆದ ಪ್ರಧಾನಿ ಮೋದಿ ಟೋಪಿ- ವಿಶೇಷತೆ ಏನು?

ನವದೆಹಲಿ: 73ನೇ ಗಣರಾಜ್ಯೋತ್ಸವದ ನಿಮಿತ್ತ ದೆಹಲಿಯ ರಾಜ್‍ಪಥ್‍ಗೆ ಆಗಮಿಸಿದ ಪ್ರಧಾನಿ ನರೇಂದ್ರ ಮೋದಿ ಅವರ ಉಡುಗೆಯ ಶೈಲಿ ಎಲ್ಲರನ್ನೂ ಆಕರ್ಷಿಸಿತು.

ಪ್ರಧಾನಿ ಮೋದಿ ಅವರು ಉತ್ತರ ಖಂಡದ ರಾಷ್ಟ್ರೀಯ ಹೂವು ಬ್ರಹ್ಮಕಮಲದೊಂದಿಗೆ ಉತ್ತರಾಖಂಡದ ಟೋಪಿಯನ್ನು ಧರಿಸಿದ್ದಾರೆ. ಜೊತೆಗೆ ಮಣಿಪುರದ ಶಾಲು ಧರಿಸಿರುವುದು ವಿಶೇಷವಾಗಿದೆ. ಮೋದಿ ಅವರ ಉಡುಗೆಯು ಈಗಾಗಲೇ ಸಾಮಾಜಿಕ ಜಾಲತಾಣದಲ್ಲಿ ಟ್ರೇಂಡಿಂಗ್‍ನ್ನು ಸೃಷ್ಟಿಸಿದೆ.

ಪ್ರಧಾನಿ ಮೋದಿಯವರು ಬ್ರಹ್ಮಕಮಲವನ್ನು ತುಂಬಾ ಇಷ್ಟಪಡುತ್ತಾರೆ. ಕೇದಾರನಾಥದಲ್ಲಿ ಪೂಜೆ ಮಾಡಿದಾಗಲೆಲ್ಲಾ ಈ ಹೂವನ್ನು ಬಳಸುತ್ತಾರೆ. ಕುತೂಹಲಕಾರಿ ವಿಷಯವೆಂದರೆ ಮುಂದಿನ ತಿಂಗಳು ವಿಧಾನಸಭೆ ಚುನಾವಣೆ ನಡೆಯುವ ರಾಜ್ಯಗಳಿಗೆ ಪ್ರಧಾನಿಯವರ ಉಡುಗೆಯು ಸಂಬಂಧಿಸಿವೆ.

Edited By : Vijay Kumar
PublicNext

PublicNext

26/01/2022 11:54 am

Cinque Terre

40.66 K

Cinque Terre

23

ಸಂಬಂಧಿತ ಸುದ್ದಿ