ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹೊಸ ಅವತಾರದಲ್ಲಿ ರಾಹುಲ್ ಗಾಂಧಿ.!

ನವದೆಹಲಿ: ಪಂಚ ರಾಜ್ಯಗಳ ಚುನಾವಣೆ ದಿನದಿಂದ ದಿನಕ್ಕೆ ರಂಗೇರುತ್ತಿದೆ. ಸಾಮಾಜಿಕ ಜಾಲತಾಣದಲ್ಲೂ ಕಾಂಗ್ರೆಸ್‌, ಬಿಜೆಪಿ ಸೇರಿದಂತೆ ಎಲ್ಲ ಪಕ್ಷಗಳು ಪ್ರಚಾರವನ್ನು ಭರ್ಜರಿಯಾಗಿ ನಡೆಸಿವೆ. ಪಂಜಾಬ್‌ನಲ್ಲಿ ಮತ್ತೆ ಅಧಿಕಾರಕ್ಕೆ ಬರಲು ಕಾಂಗ್ರೆಸ್‌ ಸರ್ವಪ್ರಯತ್ನ ನಡೆಸಿದೆ.

ಈಗ ಪಂಜಾಬ್​​ ಕಾಂಗ್ರೆಸ್​ ತನ್ನ ಟ್ವಿಟರ್​ ಖಾತೆಯಲ್ಲಿ "ಕಾಂಗ್ರೆಸ್ ಹಿ ಆಯೇಗಿ" ಎಂಬ ಹ್ಯಾಶ್ ಟಾಗ್ ನೀಡಿ ವಿಡಿಯೋವೊಂದು ಪೋಸ್ಟ್​ ಮಾಡಿದ್ದು ಭಾರೀ ವೈರಲ್​ ಆಗಿದೆ. ಇದು ಹಾಲಿವುಡ್​​ನ 'ಅವೆಂಜರ್ಸ್ ಚಿತ್ರದ ಇನ್ಫಿನಿಟಿ ವಾರ್' ಸಿನಿಮಾದ ದೃಶ್ಯವಾಗಿದೆ. ಇಲ್ಲಿ ಕಾಂಗ್ರೆಸ್​ ವರಿಷ್ಠ ರಾಹುಲ್​​ ಗಾಂಧಿ, ಸಿಎಂ ಚರಂಜಿತ್ ಸಿಂಗ್ ಚನ್ನಿ, ಪಂಜಾಬ್​ ಕಾಂಗ್ರೆಸ್​ ಅಧ್ಯಕ್ಷ ನವಜೋತ್​ ಸಿಂಗ್​​ ಸಿಧು ಅವರನ್ನು ಹೀರೋಗಳಾಗಿ ಬಿಂಬಿಸಿದ ವಿಡಿಯೋ ಇದಾಗಿದೆ. ಇನ್ನು ಪ್ರಧಾನಿ ನರೇಂದ್ರ ಮೋದಿ ಮತ್ತು ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಅವರನ್ನು ಏಲಿಯನ್ಸ್ (ಶತ್ರುಗಳ) ಪಾತ್ರಗಳಲ್ಲಿ ತೋರಿಸಿದ್ದಾರೆ.

ಬಿಜೆಪಿಯನ್ನು ಸೋಲಿಸಲು ರಾಹುಲ್​ ಗಾಂಧಿ ಬರಲಿದ್ದಾರೆ ಎಂದು ತೋರಿಸಲು ಹೋಗಿ ಕಾಂಗ್ರೆಸ್ಸೇ ಟ್ರಾಲ್​ ಆಗಿದೆ. ನೆಟ್ಟಿಗರು ಭಾರೀ ಕೆಟ್ಟದಾಗಿ ಕಾಂಗ್ರೆಸ್​ ನಾಯಕರನ್ನು ಕಾಲೆಳೆದಿದ್ದಾರೆ.

Edited By : Vijay Kumar
PublicNext

PublicNext

26/01/2022 08:20 am

Cinque Terre

132.77 K

Cinque Terre

16

ಸಂಬಂಧಿತ ಸುದ್ದಿ