ಉತ್ತರ ಪ್ರದೇಶ: ಪಂಚರಾಜ್ಯದ ವಿಧಾನಸಭಾ ಚುನಾವಣೆ ರಂಗು ಜೋರಾಗಿದೆ. ಸದ್ಯ ಉತ್ತರ ಪ್ರದೇಶದಲ್ಲಿ ಯು ಪಿ ಮೆ ಕಾ ಬಾ ಅನ್ನೊ ಹಾಡು ಸೂಪರ್ ಡ್ಯೂಪರ್ ಆಗಿಯೇ ವೈರಲ್ ಆಗಿದೆ. ಇದೇ ಹಾಡನ್ನ ಕೇಳಿದ ಕೇಂದ್ರದ ಮಾಜಿ ಸಚಿವ ಆರ್.ಪಿ.ಎನ್ ಸಿಂಗ್ ರಿಯಾಕ್ಟ್ ಮಾಡಿದ್ದಾರೆ. ಹಾಡಿನ ಸಾಲುಗಳನ್ನ ಹೇಳುತ್ತಲೇ ಪ್ರತಿಕ್ರಿಯೆ ನೀಡಿದ್ದಾರೆ.
ಹೌದು. ಆರ್.ಪಿ.ಎನ್.ಸಿಂಗ್ ಕಾಂಗ್ರೆಸ್ ನಲ್ಲಿಯೇ ಇದ್ದೋರು.ಆದರೆ ಈಗ ಬಿಜೆಪಿ ಪಕ್ಷವನ್ನ ಸೇರಿಕೊಂಡಿದ್ದಾರೆ. ಇದೇ ವೇಳೆನೆ ಯು ಪಿ ಮೆ ಕಾ ಬಾ (ಯುಪಿಯಲ್ಲಿ ಏನ್ ಇದೆ) ಅನ್ನೋ ಹಾಡಿನ ಬಗ್ಗೆ ಕೇಳಿದಾಗ ಆ ಗೀತೆಯನ್ನ ಹಾಡಿನೇ ತೋರಿಸಿ ತಮ್ಮ ಅಭಿಪ್ರಾಯವನ್ನ ವ್ಯಕ್ತಪಡಿಸಿದ್ದಾರೆ. ಆ ವೀಡಿಯೋ ಕೂಡ ಹೆಚ್ಚು ಗಮನ ಸೆಳೆಯುತ್ತಿದೆ.
PublicNext
25/01/2022 06:18 pm