ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಅಭಿಮಾನಿಗಳ ಅತಿರೇಕದ ಸನ್ಮಾನ-ಪಟಗಾ ಬಿಸಾಡಿದ ಸಿದ್ದರಾಮಯ್ಯ

ಬಾಗಲಕೋಟೆ: ಮಾಜಿ ಸಿಎಂ ಸಿದ್ದರಾಮಯ್ಯ ಸದ್ಯ ಸ್ವಕ್ಷೇತ್ರದ ಬಾದಾಮಿ ಪ್ರವಾಸದಲ್ಲಿದ್ದಾರೆ.ಇಲ್ಲಿಯ ಅಭಿಮಾನಿಗಳು ತಲೆಗೆ ಪಟ್ಗಾ ಹಾಕಿ ಸನ್ಮಾನಿಸಲು ಮುಂದಾದರು. ಇದರಿಂದ ಫುಲ್ ಗರಂ ಆದ ಸಿದ್ದರಾಮಯ್ಯನವ್ರು ಪಟಗಾವನ್ನೇ ಕಿತ್ತೆಸದು ಸಿಟ್ಟು ಹೊರಹಾಕಿದ್ದಾರೆ.

ಹೌದು. ಈ ಘಟನೆ ಬಾದಾಮಿ ತಾಲೂಕಿನ ಕಾತರಕಿ ಗ್ರಾಮದಲ್ಲಿ ನಡೆದಿದೆ. ಸನ್ಮಾನ ಮಾಡೋದಾದ್ರೆ ಇಲ್ಲಿಯೇ ಮಾಡಿ. ಹೊರಗಡೆ ಬೇಡ ಅಂತಲೇ ಸಿದ್ದರಾಮಯ್ಯ ಅಭಿಮಾನಿಗಳಿಗೆ ಹೇಳ್ತಾರೆ. ಇದೇ ವೇಳೆನೇ ಅಭಿಮಾನಿಗಳು, ನಿಮಗೆ ಪಟಗಾ ಹಾಕಿ ಸನ್ಮಾನ ಮಾಡ್ತೀವಿ ಅಂತಲೇ ಕೇಳಿಕೊಳ್ತಾರೆ. ಆದರೆ ಸಿದ್ದರಾಮಯ್ಯನವ್ರು ಇದಕ್ಕೆ ಒಪ್ಪೋದೇ ಇಲ್ಲ ಬಿಡಿ.

ಆದರೂ ಅಭಿಮಾನಿಯೊಬ್ಬ ಪಟಗಾ ತಂದು ಸಿದ್ದರಾಮಯ್ಯನವರ ತಲೆ ಮೇಲೆ ಇಟ್ಟೇ ಬಿಡ್ತಾರೆ. ಆಗಲೆ ನೋಡಿ, ಸಿಟ್ಟಿಗೆದ್ದ ಸಿದ್ದರಾಮಯ್ಯನವರು ಪಟಗಾ ತೆಗೆದು ಬಿಸಾಡಿ ಬಿಡ್ತಾರೆ.

Edited By : Nagesh Gaonkar
PublicNext

PublicNext

25/01/2022 05:32 pm

Cinque Terre

159.13 K

Cinque Terre

22

ಸಂಬಂಧಿತ ಸುದ್ದಿ