ಚೆನ್ನೈ: ಪಟ್ಟಣ ಪಂಚಾಯಿತಿ ಕಚೇರಿಗೆ ನುಗ್ಗಿ ಬಲವಂತವಾಗಿ ಪ್ರಧಾನಿ ನರೇಂದ್ರ ಮೋದಿ ಅವರ ಫೋಟೋವನ್ನು ನೇತುಹಾಕಿದ ಬಿಜೆಪಿ ಮುಖಂಡನನ್ನು ತಮಿಳುನಾಡು ಪೊಲೀಸರು ಬಂಧಿಸಿದ್ದಾರೆ.
ಕೊಯಮತ್ತೂರುನಲ್ಲಿ ಸೋಮವಾರ ಈ ಘಟನೆ ನಡೆದಿದೆ. ಕೊಯಮತ್ತೂರು ಬಿಜೆಪಿಯ ಟ್ರೇಡ್ ಯೂನಿಯನ್ ಜಿಲ್ಲಾ ಕಾರ್ಯದರ್ಶಿ ಎಂ ಭಾಸ್ಕರನ್ ಬಂಧಿತರು. ಪೂಲುವಪಟ್ಟಿಯಲ್ಲಿರುವ ಪಟ್ಟಣ ಪಂಚಾಯಿತಿ ಕಚೇರಿಗೆ ನುಗ್ಗಿದ ಬಿಜೆಪಿ ಸದಸ್ಯರು ಪ್ರಧಾನಿ ಮೋದಿ ಅವರ ಭಾವಚಿತ್ರವನ್ನು ಬಲವಂತವಾಗಿ ನೇತುಹಾಕಿದ್ದಾರೆ.
ಈ ಸಂಬಂಧ ಅತಿಕ್ರಮ ಪ್ರವೇಶ ಮತ್ತು ಕ್ರಿಮಿನಲ್ ಬೆದರಿಕೆ ಅಡಿ ಬಿಜೆಪಿ ಪಕ್ಷದ ಎಂ.ಭಾಸ್ಕರನ್ ಸೇರಿ 11 ಮಂದಿ ಬಿಜೆಪಿ ಕಾರ್ಯಕರ್ತರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಆದರೆ ಇದಕ್ಕೂ ಮುನ್ನವೇ ಸಾಮಾಜಿಕ ಜಾಲತಾಣದ ಮೂಲಕ ಎಂ ಭಾಸ್ಕರನ್ ಅವರು ಪೂಲುವಪಟ್ಟಿಯಲ್ಲಿರುವ ಪಟ್ಟಣ ಪಂಚಾಯಿತಿ ಕಚೇರಿಯಲ್ಲಿ ಪ್ರಧಾನಿ ಮೋದಿ ಫೋಟೋ ಹಾಕಲು ಮನವಿಕೊಂಡಿದ್ದರು. ಆದರೆ ಇದಕ್ಕೆ ಒಪ್ಪದೆ ಇದ್ದಾಗ ಕಚೇರಿಗೆ ನುಗ್ಗಿದ ಫೋಟೋ ಹಾಕಿದ್ದಾರೆ ಎನ್ನಲಾಗಿದೆ.
PublicNext
25/01/2022 12:59 pm