ದೆಹಲಿ:ಕೋವಿಡ್ ಪಾಸಿಟಿವಿಟಿ ಸಂಖ್ಯೆ ಕಡಿಮೆ ಆಗುತ್ತಿದೆ.ಮುಂದಿನ ದಿನಗಳಲ್ಲಿ ಕೋವಿಡ್ ಕಠಿಣ ನಿಯಮ ತೆಗೆಯಲಾಗುವುದು. ಅತಿ ಶೀಘ್ರದಲ್ಲಿಯೇ ಜೀವನ ಎಂದಿನಂತೆ ಸಹಜ ಸ್ಥಿತಿಗೆ ಬರುತ್ತದೆ ಎಂದು ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಹೇಳಿದ್ದಾರೆ.
ಕಳೆದ 10 ದಿನಗಳಲ್ಲಿ ಕೋವಿಡ್ ಪಾಸಿಟಿವಿಟಿ ರೇಟ್ ಶೇಕಡ-20 ರಷ್ಟು ಇಳಿದಿದೆ. ಮುಂದಿನ ದಿನಗಳಲ್ಲಿ ಇದು ಇನ್ನೂ ಕಡಿಮೆ ಆಗುತ್ತದೆ. ಹಾಗಾಗಿಯೇ ಅತಿ ಶೀಘ್ರದಲ್ಲಿಯೇ ಕೋವಿಡ್ ನಿರ್ಬಂಧಗಳನ್ನ ತೆಗೆಯಲಾಗುವುದು ಎಂದು ಸಿಎಂ ಕೇಜ್ರಿವಾಲ್ ಹೇಳಿದ್ದಾರೆ.
PublicNext
25/01/2022 12:33 pm