ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನಾನಾಗೇ ಹೋಗಿ ಸಚಿವ ಸ್ಥಾನ ಕೇಳಲು ಆಗುತ್ತಾ, ಗೌರವ ಬೇಡ್ವಾ: ಸಂಸದ ಸಿದ್ದೇಶ್ವರ್

ದಾವಣಗೆರೆ: ಜಿಲ್ಲೆಗೆ ಸಚಿವ ಸ್ಥಾನ ನೀಡಿ ಎಂದು ಕೇಳಲು ನನಗೆ ಗೌರವ ಬೇಕಲ್ವಾ ಎಂದು ದಾವಣಗೆರೆ ಲೋಕಸಭಾ ಸದಸ್ಯ ಜಿ. ಎಂ. ಸಿದ್ದೇಶ್ವರ್ ಹೇಳಿದ್ದಾರೆ.

ನಗರದ ಗಡಿಯಾರ ಕಂಬದ ಬಳಿ ನಿವೃತ್ತ ಸೈನಿಕರ ಸ್ಮಾರಕ ಭವನ ಉದ್ಘಾಟನೆ ನೆರವೇರಿಸಿದ ಬಳಿಕ ಮಾಧ್ಯಮದವರ ಜೊತೆ ಮಾತನಾಡಿದ ಅವರು, ಗೌರವ ಇಲ್ಲದೇ ನಾನು ಹೋಗಲು ಆಗುತ್ತಾ. ಜಿಲ್ಲೆಯ ಯಾವ ಶಾಸಕರು ನನ್ನ ಬಳಿ ಬಂದು ಕೇಳಿಲ್ಲ ಎಂದರು.

ಸಚಿವ ಸ್ಥಾನಕ್ಕೆ ಒತ್ತಡ ಹೇರಿ ಯಾರೂ ಬಾರದೇ ನಾನು ಹೋಗಲು ಹೇಗೆ ಸಾಧ್ಯ. ಜಿಲ್ಲೆಯ ಒಬ್ಬ ಶಾಸಕರಿಗಾದರೂ ಸಚಿವ ಸ್ಥಾನ ಕೊಡಿ ಎಂಬುದಕ್ಕೆ ನನ್ನ ಸಹಮತ ಇದೆ. ಎಲ್ಲರೂ ಒಟ್ಟಾಗಿ ಬಂದರೆ ನಾನು ಪ್ರಯತ್ನ ಪಡುತ್ತೇನೆ.‌ಯಾರೂ ಬಾರದೇ ನಾನು ಹೋಗಿ ಮುಜುಗರ ಅನುಭವಿಸಲಾ? ಎಂದು ಪ್ರಶ್ನಿಸಿದರು.

Edited By : Nagesh Gaonkar
PublicNext

PublicNext

24/01/2022 04:05 pm

Cinque Terre

41.14 K

Cinque Terre

1

ಸಂಬಂಧಿತ ಸುದ್ದಿ