ದಾವಣಗೆರೆ: ಮಾಜಿ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪರ ಜೊತೆ ಸೇರಿ ನಾನು ಪಕ್ಷ ಕಟ್ಟಿದ್ದೇ ಅಪಾಯ ತಂತು ಎಂದು ಬಿಜೆಪಿ ಹಿರಿಯ ಶಾಸಕ ಎಸ್. ಎ. ರವೀಂದ್ರನಾಥ್ ಬೇಸರ ವ್ಯಕ್ತಪಡಿಸಿದ್ದಾರೆ.
ಮಾಧ್ಯಮದವರ ಜೊತೆ ಮಾತನಾಡಿದ ಅವರು,ದಾವಣಗೆರೆ ಜಿಲ್ಲೆಯಲ್ಲಿ ಓಡಾಡಿ ನಾನು ಪಕ್ಷ ಕಟ್ಟಿದ್ದೇನೆ. ಸಚಿವ ಸ್ಥಾನ ಸಿಕ್ಕರೆ ಒಳ್ಳೆಯ ಕೆಲಸ ಮಾಡುತ್ತೇನೆ. ದಾವಣಗೆರೆಗೆ ಸಚಿವ ಸ್ಥಾನ ನೀಡುವಂತೆ ಬಿಜೆಪಿ ಶಾಸಕರೆಲ್ಲರೂ ಕೇಳಿದ್ದೇವೆ ಎಂದು ತಿಳಿಸಿದರು.
ಶಾಸಕ ರೇಣುಕಾಚಾರ್ಯನೂ ಸಚಿವನಾಗಿದ್ದನಲ್ವಾ. ನಾನು ಹೊಸಬರಿಗೆ ಅವಕಾಶ ನೀಡಿ ಎಂದು ಒತ್ತಾಯ ಮಾಡುತ್ತೇನೆ. ಈಗಾಗಲೇ ರೇಣುಕಾಚಾರ್ಯ ಮಂತ್ರಿಯಾಗಿದ್ದಾನೆ. ನಾನು ಏಳು ವರ್ಷ ಮಂತ್ರಿಯಾಗಿದ್ದೆ, ಅದಕ್ಕೆ ಸಚಿವ ಸ್ಥಾನ ಕೊಟ್ಟಿಲ್ಲ ಎಂದು ಅಸಮಾಧಾನ ಹೊರಹಾಕಿದರು.
ಗುಜರಾತ್ ಮಾದರಿ ಇಲ್ಲಿ ಬಂದರೆ ನಾನು ಇರಲ್ಲ,ರೇಣುಕಾಚಾರ್ಯನೂ ಇರಲ್ಲ. ರೇಣುಕಾಚಾರ್ಯನನ್ನು ಸಿಎಂ ರಾಜಕೀಯ ಕಾರ್ಯದರ್ಶಿ ಮಾಡಿದ್ದಾರೆ. ಮಾಡಾಳ್ ವಿರೂಪಾಕ್ಷಪ್ಪ, ಪ್ರೊ. ಲಿಂಗಣ್ಣ, ಎಸ್. ವಿ. ರಾಮಚಂದ್ರಪ್ಪರಿಗೆ ನಿಗಮ, ಮಂಡಳಿ ಅಧ್ಯಕ್ಷ ಸ್ಥಾನ ನೀಡಿದ್ದಾರೆ. ನಾನು ಏಳು ವರ್ಷ ಮಂತ್ರಿಯಾಗಿದ್ದ ಕಾರಣ ಸಚಿವ ಸ್ಥಾನ ಕೊಟ್ಟಿಲ್ಲ ಎಂಬುದು ನನ್ನ ಅನಿಸಿಕೆ. ಸಚಿವ ಸ್ಥಾನ ಕೊಟ್ಟರೆ ಸಂತೋಷ, ನೀಡದಿದ್ದರೆ ದುಃಖವೇನೂ ಇಲ್ಲ ಎಂದು ಹೇಳಿದರು.
PublicNext
24/01/2022 03:23 pm