ಬೆಂಗಳೂರು : ರೇಣುಕಾಚಾರ್ಯ ಮಂತ್ರಿಯಾಗಲಿ ಎನ್ನುವುದು ನನ್ನ ಅಭಿಪ್ರಾಯ ಎಂದು ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದ್ದಾರೆ. ಬೆಂಗಳೂರಿನಲ್ಲಿಂದು ರಾಜಕೀಯ ಬೆಳವಣಿಗೆ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಇನ್ನು 15 ದಿನಗಳಲ್ಲಿ ಸಂಪುಟ ಪುನರ್ ರಚನೆ ಆದರೆ ಒಳ್ಳೆಯದು ಕಾಲ ಕಡಿಮೆ ಇದೆ. ಸಿಎಂ ಬದಲಾವಣೆ ಇಲ್ಲ ಎಂದು ಹೈಕಮಾಂಡ್ ಹೇಳಿದೆ ಎಂದರು.
ಸಚಿವ ಸಂಪುಟ ರಚನೆಯಲ್ಲಿ ಅವಕಾಶ ಸಿಗುವ ವಿಚಾರ ನಾನು ಏನು ಹೇಳಲು ಆಗಲ್ಲ. ಪಂಚರಾಜ್ಯ ಮುಗಿದ ಮೇಲೆ ಆಗುತ್ತೋ ಅಥವಾ ಅದಕ್ಕಿಂತ ಮೊದಲೇ ಆಗುತ್ತೋ ಕಾದುನೋಡಬೇಕಿದೆ.
ಆದ್ರೆ ಇದರಿಂದ ಒಳ್ಳೆಯ ಬೆಳವಣಿಗೆ ಆಗುತ್ತದೆ. ರೇಣುಕಾಚಾರ್ಯ ಮಂತ್ರಿಯಾಗಲಿ ಎಂದು ನಾನು ಆಶೀರ್ವಾದ ಮಾಡುತ್ತೇನೆ.
ಸಂಪುಟ ಪುನರ್ ರಚನೆ ವಿಚಾರದಲ್ಲಿ ಗುಜರಾತ್ ಮಾಡಲ್ ಮಾಡುತ್ತದೊ ಕರ್ನಾಟಕಕ್ಕೆ ಬೇರೆ ಮಾಡೆಲ್ ಮಾಡುತ್ತದೋ ಹೈಕಮಾಂಡ್ ಏನು ಮಾಡಲಿದೆ ಕಾದು ನೋಡಬೇಕು ಮುಂದೆ ಚುನಾವಣೆ ಗೆಲ್ಲಬೇಕಾದರೆ ಹೈಕಮಾಂಡ್ ಯಾವ ರೀತಿ ಸಂಪುಟ ಪುನರ್ ರಚನೆ ಮಾಡಲಿದೆ ನೋಡಬೇಕು ಎಂದರು.
ಮೊದಲು ಕೊರೊನಾ ಸಮರ್ಥವಾಗಿ ಎದುರಿಸಬೇಕು ಪಕ್ಷದ ಹೈಕಮಾಂಡ್ ಯಾವ ರೀತಿ ಬದಲಾವಣೆ ಮಾಡುತ್ತೆ ನೋಡೋಣ ಗುಜರಾತ್ ಮಾದರಿಯಲ್ಲಿ ಮಾಡುತ್ತೋ ಅಥವಾ ಕರ್ನಾಟಕಕ್ಕೆ ಬೇರೆ ಮಾದರಿ ಮಾಡುತ್ತೋ ನೋಡೋಣ ಮಾರ್ಚ್ ನಂತರ ಸಚಿವ ಸಂಪುಟ ರಚನೆ ಆದ್ರೆ ಉಪಯೋಗ ಇಲ್ಲ ಎಂದರು.
ಮಾಡುವುದಿದ್ರೆ ಇವಾಗ್ಲೇ ಮಾಡಿ ಇಲ್ಲ ಅಂದರೆ ಶಾಸಕರಾಗಿ ಕೊನೆ ಪಕ್ಷ ಒಂದು ವರ್ಷ ಇದ್ದಾಗ ಮಾಡಿದ್ರೆ ಪರಿಣಾಮಕಾರಿಯಾಗಿ ಅಭಿವೃದ್ಧಿ ಮಾಡಬಹುದು ಎಂದರು.
PublicNext
21/01/2022 09:57 am