ಇಸ್ಲಾಮಾಬಾದ್: ವಾಟ್ಸ್‌ಆ್ಯಪ್ ಮೂಲಕ ಪ್ರವಾದಿಯ ವ್ಯಂಗ್ಯಚಿತ್ರವನ್ನು ಸ್ನೇಹಿತನಿಗೆ ಶೇರ್ ಮಾಡಿದ್ದ ಯುವತಿಗೆ ಪಾಕಿಸ್ತಾನದ ರಾವಲ್ಪಿಂಡಿ ಕೋರ್ಟ್ ಗಲ್ಲು ಶಿಕ್ಷೆ ನೀಡಿದೆ.
2020ರಲ್ಲಿ ಫಾರೂಕ್ ಹಸನಾತ್ ಎಂಬಾತ ಅನಿಕಾ ಅಟಿಕ್ ಎಂಬ ಯುವತಿ ಮೇಲೆ ಧರ್ಮನಿಂದನೆಯ ಆರೋಪ ಹೊರಿಸಿದ್ದ. ಇದೀಗ ಮಹಿಳೆಯ ಮೇಲಿನ ಆರೋಪ ಸಾಬೀತಾಗಿದ್ದು ಕೋರ್ಟ್ ದೋಷಿ ಎಂದು ತೀರ್ಪು ನೀಡಿದೆ.
ಅನಿಕಾ ಪ್ರವಾದಿ ವಿರುದ್ಧ ಧರ್ಮ ನಿಂದನೆ, ಇಸ್ಲಾಂ ಧರ್ಮದ ಅವಮಾನ ಹಾಗೂ ಸೈಬರ್ ಕ್ರೈಂ ಕಾನೂನುಗಳನ್ನು ಉಲ್ಲಂಘಿಸಿದ್ದಾರೆ ಎಂಬ ಆರೋಪಕ್ಕೆ ಸಾಕ್ಷ್ಯಗಳೊಂದಿಗೆ ಪೊಲೀಸರು ಆರೋಪಪಟ್ಟಿ ಸಲ್ಲಿಸಿದ್ದರು. ಈ ಆರೋಪದ ವಿಚಾರಣೆ ನಡೆಸಿದ ಕೋರ್ಟ್ ಧರ್ಮ ನಿಂದನೆ, ಇಸ್ಲಾಂ ಧರ್ಮದ ಅವಮಾನ ಹಾಗೂ ಸೈಬರ್ ಕ್ರೈಂ ಕಾನೂನುಗಳನ್ನು ಆರೋಪಿ ಅನಿಕಾ ಉಲ್ಲಂಘಿಸಿದ್ದಾಳೆ ಎಂದು ತೀರ್ಪು ಕೊಟ್ಟಿದೆ. ಹಾಗೂ ಗಲ್ಲು ಶಿಕ್ಷೆ ಜಾರಿಗೊಳಿಸಿದೆ.
PublicNext
20/01/2022 05:04 pm