ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಲಡಾಖ್‌ನಲ್ಲಿ ಚೀನಾದಿಂದ ಸೇತುವೆ ನಿರ್ಮಾಣ, ಮೋದಿಯಿಂದ ಉದ್ಘಾಟನೆ: ರಾಹುಲ್ ಗಾಂಧಿ ವಾಗ್ದಾಳಿ

ನವದೆಹಲಿ: ಲಡಾಖ್‍ನ ಪ್ಯಾಂಗ್ಯಾಂಗ್ ತ್ಸೋ ಸರೋವರದ ಮೇಲೆ ಚೀನಾ ಅಕ್ರಮವಾಗಿ ಆಯಕಟ್ಟಿನ ಸೇತುವೆಯನ್ನು ನಿರ್ಮಿಸುತ್ತಿದೆ. ಇದನ್ನು ಉದ್ಘಾಟಿಸಲು ಪ್ರಧಾನಿ ನರೇಂದ್ರ ಮೋದಿ ಹೋಗಬಹುದು ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದ್ದಾರೆ.

ಚೀನಾ ಅಕ್ರಮವಾಗಿ ನಿರ್ಮಿಸುತ್ತಿರುವ ಆಯಕಟ್ಟಿನ ಸೇತುವೆಯ ಬಗ್ಗೆ ಪ್ರಧಾನಿ ಮೋದಿ ಅವರು ಮೌನವಹಿಸಿರುವುದು ಏಕೆ ಎಂದು ರಾಹುಲ್ ಗಾಂಧಿ ಪ್ರಶ್ನಿಸಿದ್ದಾರೆ. ಚೀನಾ ನಮ್ಮ ದೇಶದಲ್ಲಿ ಆಯಕಟ್ಟಿನ ಸೇತುವೆಯನ್ನು ನಿರ್ಮಿಸುತ್ತಿದೆ. ಮೋದಿ ಅವರು ಈ ಬಗ್ಗೆ ಮೌನವಾಗಿರುವುದರಿಂದಾಗಿ ಚೀನಾ ಸೈನಿಕರಲ್ಲಿ ಉತ್ಸಾಹ ಹುಕ್ಕಿಹರಿಯುತ್ತಿದೆ. ಈಗ ಈ ಸೇತುವೆಯನ್ನು ಉದ್ಘಾಟಿಸಲು ಪ್ರಧಾನಿ ಹೋಗಬಹುದು ಎಂಬ ಭಯವಿದೆ ಎಂದು ರಾಹುಲ್‌ ಗಾಂಧಿ ಟ್ವೀಟ್ ಮೂಲಕ ಆರೋಪಿಸಿದ್ದಾರೆ. ಅಲ್ಲದೇ ಸೇತುವೆಯ ಫೋಟೋವನ್ನು ಹಂಚಿಕೊಂಡಿದ್ದಾರೆ.

Edited By : Vijay Kumar
PublicNext

PublicNext

20/01/2022 08:42 am

Cinque Terre

107.4 K

Cinque Terre

19

ಸಂಬಂಧಿತ ಸುದ್ದಿ