ಗೋವಾ:ಪಂಚ ರಾಜ್ಯಗಳ ಚುನಾವಣೆ ಅಬ್ಬರ ಜೋರಾಗಿದೆ. ನಿನ್ನೆ ಆಮ್ ಆದ್ಮಿಯ ಪಂಜಾಬ್ ರಾಜ್ಯದ ಸಿಎಂ ಅಭ್ಯರ್ಥಿ ಘೋಷಣೆ ಮಾಡಲಾಗಿದೆ. ಇಂದು ಗೋವಾ ರಾಜ್ಯದ ಸಿಎಂ ಅಭ್ಯರ್ಥಿಯ ಘೋಷಣೆ ಆಗಿದೆ.
ಆಮ್ ಆದ್ಮಿ ಪಕ್ಷದ ರಾಷ್ಟ್ರೀಯ ಸಂಚಾಲಕ ಅರವಿಂದ್ ಕೇಜ್ರಿವಾಲ್ ಭಾರಿ ಜೋಶ್ ನಲ್ಲಿಯೇ ಇದ್ದಾರೆ. ತಮ್ಮ ಪಕ್ಷದ ಸಿಎಂ ಅಭ್ಯರ್ಥಿಯನ್ನ ಘೋಷಿಸುತ್ತಲೇ ಇದ್ದಾರೆ. ಇವತ್ತು ಗೋವಾ ರಾಜ್ಯದ ವಿಧಾನಸಭಾ ಚುನಾವಣೆಯ ತಮ್ಮ ಪ್ಷಕದ ಸಿಎಂ ಅಭ್ಯರ್ಥಿಯನ್ನಾಗಿ ಅಮಿತ್ ಪಾಲೇಕರ್ ಅವರ ಹೆಸರನ್ನ ಘೋಷಿಸಿದ್ದಾರೆ.
ಗೋವಾ ರಾಜ್ಯದ ಜನತೆಯ ಕನಸುಗಳನ್ನ ಇವರು ನನಸು ಮಾಡುತ್ತಾರೆಂಬ ಭರವಸೆಯ ಮಾತುಗಳನ್ನೂ ಆಡಿದ್ದಾರೆ ಅರವಿಂದ್ ಕೇಜ್ರಿವಾಲ್.
PublicNext
19/01/2022 02:53 pm