ಬೆಂಗಳೂರು: "ಜಗತ್ತಿನಲ್ಲಿ ಊಟಕ್ಕೆ ಕುಳಿತಾಗ ಮಾಸ್ಕ್ ಹಾಕಿಕೊಂಡು ಊಟ ತಿನ್ನಬೇಕು ಅಂತ ಹೇಳುವ ಪಕ್ಷ ಕಾಂಗ್ರೆಸ್"
ಹೀಗಂತ ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ ರೇಣುಕಾಚಾರ್ಯ ಟ್ವೀಟ್ ಮಾಡಿದ್ದಾರೆ. ಇತ್ತೀಚಿಗೆ ತಮ್ಮ ಕ್ಷೇತ್ರದ ಶಾಲೆಯೊಂದಕ್ಕೆ ಭೇಟಿ ಕೊಟ್ಟಿದ್ದ ರೇಣುಕಾಚಾರ್ಯ ಅಲ್ಲಿನ ಮಕ್ಕಳೊಂದಿಗೆ ಗುಂಪಿನಲ್ಲಿ ಕುಳಿತು ಊಟ ಮಾಡಿದ್ದರು. ಇದರ ವಿಡಿಯೋ ತುಣುಕು ಹಂಚಿಕೊಂಡಿದ್ದ ರಾಜ್ಯ ಕಾಂಗ್ರೆಸ್ ಟ್ವೀಟ್ ಮಾಡಿತ್ತು.
"ಶಾಸಕ ರೇಣುಕಾಚಾರ್ಯ ನಿಮ್ಮದೇ ಸರ್ಕಾರದ ಕೋವಿಡ್ ನಿಯಮಗಳನ್ನು ಉಲ್ಲಂಘಿಸಿ ಮಾಸ್ಕ್ ಕೂಡ ಧರಿಸದೇ ಮಕ್ಕಳೊಂದಿಗೆ ಬೆರೆತಿದ್ದಾರೆ. ಇದಕ್ಕೆ ಸಾಕ್ಶಿ ಇದೆ. ಈಗಲಾದರೂ ಇವರ ಮೇಲೆ ಕೇಸ್ ದಾಖಲಿಸುವ ಧೈರ್ಯ ತೋರುವಿರಾ? ಈ ದೇಶದ ಕಾನೂನು ನಿಮ್ಮ ಶಾಸಕರಿಗೆ ಅನ್ವಯಿಸೋದಿಲ್ವಾ?" ಎಂದು ಬರೆದಿದ್ದ ಕಾಂಗ್ರೆಸ್, ಸಿಎಂ, ಗೃಹ ಮಂತ್ರಿಯನ್ನು ಉಲ್ಲೇಖಿಸಿತ್ತು.
ಇದಕ್ಕೆ ಪ್ರತಿಕ್ರಿಯೆ ನೀಡಿರುವ ಶಾಸಕ ರೇಣುಕಾಚಾರ್ಯ ಊಟ ಕುಳಿತಾಗ ಮಾಸ್ಕ್ ಹಾಕಬೇಕು ಎಂದು ಹೇಳುವ ಜಗತ್ತಿನ ಏಕೈಕ ಪಕ್ಷ ಕಾಂಗ್ರೆಸ್ ಎಂದು ಕಿಡಿಕಾರಿದ್ದಾರೆ.
PublicNext
19/01/2022 11:12 am