ನವದೆಹಲಿ: ದೇಶದ ಬಹುತ್ವ ಸಂಸ್ಕೃತಿ ಹಾಗೂ ಪರಂಪರೆಯಯನ್ನು ಪ್ರತಿನಿಧಿಸುವ ನವದೆಹಲಿಯ ಗಣರಾಜ್ಯೋತ್ಸವ ಪರೇಡ್‌ನಿಂದ ಕೆಲವು ಸ್ತಬ್ಧ ಚಿತ್ರಗಳನ್ನು ಕೇಂದ್ರ ಸರ್ಕಾರ ತಿರಸ್ಕರಿಸಿರುವುದು ವಿವಾದಕ್ಕೆ ಕಾರಣವಾಗಿದೆ.ತಮ್ಮ ರಾಜ್ಯಗಳಿಂದ ಪೆರೇಡ್‌ನಲ್ಲಿ ಪ್ರದರ್ಶಿಸಲು ಕಳುಹಿಸಿದ ಸ್ತಬ್ಧ ಚಿತ್ರಗಳನ್ನು ತಿರಸ್ಕರಿಸಿದ ಕೇಂದ್ರದ ನಡೆಯನ್ನು ತಮಿಳುನಾಡು, ಕೇರಳ ಹಾಗೂ ಪಶ್ಚಿಮ ಬಂಗಾಳ ಸರ್ಕಾರಗಳು ಖಂಡಿಸಿವೆ.
ಗಣರಾಜ್ಯೋತ್ಸವದ ಪರೇಡ್‌ನಿಂದ ತಮ್ಮ ಸ್ತಬ್ಧ ಚಿತ್ರಗಳನ್ನು ಹೊರಗಿಟ್ಟಿರುವುದು ಅವಮಾನ ಎಂದು ಆರೋಪಿಸಿದ್ದಕ್ಕಾಗಿ ರಾಜ್ಯಗಳನ್ನು ತರಾಟೆಗೆ ತೆಗೆದುಕೊಂಡಿರುವ ಕೇಂದ್ರ ಸರ್ಕಾರ, ಇದು ತಪ್ಪು ನಿದರ್ಶನ ಎಂದು ಹೇಳಿದೆ ಮತ್ತು ಇದನ್ನು ನಿರ್ಧರಿಸುವುದು ಕೇಂದ್ರವಲ್ಲ, ತಜ್ಞರ ಸಮಿತಿ ಶಾರ್ಟ್ ಲಿಸ್ಟ್ ತಯಾರು ಮಾಡುತ್ತದೆ ಎಂದು ಹೇಳಿದೆ.
ಕೇರಳ, ತಮಿಳುನಾಡು ಮತ್ತು ಪಶ್ಚಿಮ ಬಂಗಾಳದ ಸ್ತಬ್ಧ ಚಿತ್ರಗಳ ಪ್ರಸ್ತಾವಗಳನ್ನು ಚರ್ಚೆಗಳ ಬಳಿಕ ತಜ್ಞರ ಸಮಿತಿ ತಿರಸ್ಕರಿಸುವುದಾಗಿ ಕೇಂದ್ರ ಸರ್ಕಾರ ಸೋಮವಾರ ತಿಳಿಸಿದೆ. ಈ ವಿಚಾರವನ್ನು ಕೇಂದ್ರ ಮತ್ತು ರಾಜ್ಯಗಳ ನಡುವಿನ ಘರ್ಷಣೆಯಾಗಿ ಬಿಂಬಿಸಲು ರಾಜ್ಯಗಳು ಮುಖ್ಯಮಂತ್ರಿಗಳು ಅಳವಡಿಸಿಕೊಂಡದ್ದು ತಪ್ಪು ನಿದರ್ಶನವಾಗಿದೆ. ಇದು ದೇಶದ ಒಕ್ಕೂಟ ವ್ಯವಸ್ಥೆಗೆ ಹಾಳಾಗಲು ಕಾರಣವಾಗುತ್ತದೆ ಎಂದು ಕೇಂದ್ರ ಸರ್ಕಾರದ ಅಧಿಕಾರಿಯೊಬ್ಬರು ಹೇಳಿದ್ದಾರೆ.
PublicNext
18/01/2022 07:21 am