ನವದೆಹಲಿ: ಗಣರಾಜ್ಯೋತ್ಸವದ ಪರೇಡ್ ನಲ್ಲಿ ಭಾಗವಹಿಸೋ ಟ್ಯಾಬ್ಲೋಗಳ ಆಯ್ಕೆ ಬಗ್ಗೆ ಈಗ ವಿವಿಧ ರಾಜ್ಯಗಳು ಬೇಸರ ವ್ಯಕ್ತಪಡಿಸುತ್ತಿವೆ.ಈ ಹಿನ್ನೆಲೆಯಲ್ಲಿಯೇ ಸಚಿವೆ ಶೋಭಾ ಕರಂದ್ಲಾಜೆ ಸ್ವಲ್ಪ ಸ್ಟ್ರಾಂಗ್ ಆಗಿಯೇ ರಿಯಾಕ್ಟ್ ಮಾಡಿದ್ದಾರೆ. ಏನ್ ಅದು ಅಂತಿರೋ ಬನ್ನಿ ಹೇಳ್ತೀವಿ.
ಗಣರಾಜ್ಯೋತ್ಸವದ ಪರೇಡ್ ನಲ್ಲಿ ಯಾವ ರಾಜ್ಯದ ಯಾವ ಟ್ಯಾಬ್ಲೋ ಭಾಗವಹಿಸಬೇಕು ಅನ್ನೋದನ್ನ ಪ್ರಧಾನಿ ನರೇಂದ್ರ ಮೋದಿ ನಿರ್ಧರಿಸೋದಿಲ್ಲ.ಆದರೆ ವಿವಿಧ ರಾಜ್ಯಗಳು ಇದನ್ನ ತಪ್ಪಾಗಿ ತಿಳಿದುಕೊಳ್ಳುತ್ತಲೇ ಬಂದಿವೆ. ಅವಮಾನ ಆಗ್ತಾನೇ ಇದೆ ಅಂತಲೂ ಹೇಳುತ್ತಿವೆ. ಆದರೆ ನಿಜವಾದ ಸತ್ಯ ಇದಲ್ಲ ಅಂತಲೇ ಹೇಳಿದ್ದಾರೆ ಶೋಭಾ ಕರಂದ್ಲಾಜೆ .
ಗಣರಾಜ್ಯೋತ್ಸವದ ಪರೇಡ್ ನಲ್ಲಿ ಪಶ್ಚಿಮ ಬಂಗಾಳ, ಕೇರಳ ಮತ್ತು ತಮಿಳುನಾಡು ರಾಜ್ಯಗಳಿಗೆ ಈ ಸಲ ಅವಕಾಶ ನೀಡಿಲ್ಲ. ಇದು ನಮಗೆ ಮಾಡಿದ ಅನ್ಯಾಯ ಮತ್ತು ಅವಮಾನ ಅಂತಲೇ ಆಯಾ ರಾಜ್ಯಗಳು ಆರೋಪಿಸಿವೆ.ಅದಕ್ಕೇನೆ ಶೋಭಾ ಕರಂದ್ಲಾಜೆ ಮಾಧ್ಯಮಗಳಿಗೆ ಹೇಳಿಕೆ ಬಿಡುಗಡೆ ಮಾಡಿ ಈ ರೀತಿ ಸ್ಪಷ್ಟನೆ ನೀಡಿದ್ದಾರೆ.
ಗಣರಾಜ್ಯೋತ್ಸವದ ಪರೇಡ್ ನಲ್ಲಿ ಭಾಗವಹಿಸೋ ಟ್ಯಾಬ್ಲೋ ಪ್ರಸ್ತಾವನೆಯಲ್ಲಿ ಒಟ್ಟು 56 ಪ್ರಸ್ತಾವನೆ ಬಂದಿವೆ. ಅವುಗಳಲ್ಲಿ ಕೇವಲ 21 ಪ್ರಸ್ತಾವನೆಯನ್ನ ವಿಷಯ ತಜ್ಞರು ಆಯ್ಕೆ ಮಾಡಿದ್ದಾರೆ. ಸಮಯದ ಅಭಾವದಿಂದಲೇ ಕೆಲವು ಪ್ರಸ್ತಾವನೆಗಳನ್ನ ಕೈಬಿಟ್ಟಿದೆ. ಅದರಂತೆ ಕೇರಳ,ಪಶ್ಚಿಮ ಬಂಗಾಳ ಹಾಗೂ ತಮಿಳು ನಾಡು ಪ್ರಸ್ತಾವನೆಯನ್ನ ಸರಿಯಾದ ಪ್ರಕ್ರಿಯೆ ಮತ್ತು ಸೂಕ್ತ ಚರ್ಚೆ ಬಳಿಕವೇ ತಜ್ಞರು ಕೈಬಿಟ್ಟಿದ್ದಾರೆ.
PublicNext
17/01/2022 10:21 pm