ಲಖನೌ (ಉತ್ತರ ಪ್ರದೇಶ): ಮಾಜಿ ಸಿಎಂ ಹಾಗೂ ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ದಲಿತರ ತೇಜೋವಧೆ ಮಾಡ್ತಿದ್ದಾರೆ ಎಂದು ಭೀಮ್ ಆರ್ಮಿ ಮುಖ್ಯಸ್ಥ ಚಂದ್ರಶೇಖರ್ ಆಜಾದ್ ಹೇಳಿದ್ದಾರೆ.
ಮಾದ್ಯಮಗೋಷ್ಟಿಯಲ್ಲಿ ಮಾತನಾಡಿದ ಅವರು, ಅಖಿಲೇಶ್ ಯಾದವ್ ನೇತೃತ್ವದ ಮೈತ್ರಿಕೂಟದಲ್ಲಿ ದಲಿತರಿಗೆ ನಾಯಕತ್ವ ಹಾಗೂ ಸ್ಥಾನಮಾನ ನೀಡಿಲ್ಲ. ಸಮಾಜವಾದಿ ಪಕ್ಷ ದಲಿತ ಸಮುದಾಯವನ್ನು ಕೇವಲ ವೋಟ್ ಬ್ಯಾಂಕ್ ಆಗಿ ಪರಿಗಣಿಸಿದೆ. ಅಖಿಲೇಶ್‌ಗೆ ದಲಿತರ ಅವಶ್ಯಕತೆ ಇಲ್ಲ. ಅವರ ಸರ್ಕಾರ ಅಧಿಕಾರಕ್ಕೆ ಬಂದರೆ ಮತ್ತೆ ದಲಿತರ ಮೇಲೆ ದೌರ್ಜನ್ಯ, ಶೋಷಣೆ ಅತ್ಯಾಚಾರ ಪ್ರಕರಣಗಳು ನಡೆಯೋದಿಲ್ಲ ಎಂಬ ಗ್ಯಾರಂಟಿ ಇಲ್ಲ ಎಂದು ಚಂದ್ರಶೇಖರ್ ಆಜಾದ್ ಹೇಳಿದ್ದಾರೆ.
PublicNext
15/01/2022 04:20 pm