ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮೋದಿ ಸರ್ಕಾರದ ವಿರುದ್ಧರಾಹುಲ್ ಕಿಡಿ

ನವದೆಹಲಿ: ನಿಮಗಾಗಿ ನೀವು ನಿಲ್ಲದಿದ್ದರೆ, ನಿಮ್ಮ ಸ್ನೇಹಿತರಿಗೆ ಹೇಗೆ ನಿಲ್ಲುತ್ತೀರಾ ಎಂದು ಟ್ವೀಟ್ ಮಾಡುವ ಮೂಲಕ ಮೋದಿ ಸರ್ಕಾರದ ವಿರುದ್ಧ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದ್ದಾರೆ.

ಚೀನಾ ಇದೀಗ ಭೂತಾನ್ ನಲ್ಲಿ ಅಕ್ರಮವಾಗಿ ಗ್ರಾಮಗಳನ್ನು ನಿರ್ಮಿಸುತ್ತಿದೆ. ಮೋದಿ ಸರ್ಕಾರ ಮೊದಲಿಗೆ ನಮ್ಮ ಭೂಮಿಯನ್ನು ಚೀನಾಗೆ ಬಿಟ್ಟುಕೊಟ್ಟಿತು. ಇದೀಗ ಚೀನಾ ದೇಶವನ್ನು ನಿಯಂತ್ರಿಸಲಾಗದೇ ನಮ್ಮ ನೆರೆಹೊರೆಯವರು ಸಹ ಅಪಾಯಕ್ಕೆ ಸಿಲುಕಿದ್ದಾರೆ. ನೀವು ನಮ್ಮ ಪರವಾಗಿ ನಿಲ್ಲದಿದ್ದರೆ, ಸ್ನೇಹಿತರ ಪರವಾಗಿ ಹೇಗೆ ನಿಲ್ಲುತ್ತೀರಾ ಎಂದು ಟ್ವೀಟ್ ಮಾಡಿದ್ದಾರೆ.

ಗಡಿಯಲ್ಲಿ ಚೀನಾ ವಿಚಾರಕ್ಕೆ ಸಂಬಂಧಿಸಿದಂತೆ ಮೋದಿ ಸರ್ಕಾರ ನಿಭಾಯಿಸುತ್ತಿರುವುದನ್ನು ರಾಹುಲ್ ಗಾಂಧಿ ಅವರು ಟೀಕಿಸಿದ್ದಾರೆ. 2017 ರಲ್ಲಿ ದೋಕ್ಲಾಂ ಬಳಿ ಭಾರತೀಯ ಸೇನೆ ಮತ್ತು ಚೀನಾದ ಪೀಪಲ್ಸ್ ಲಿಬರೇಶನ್ ಆರ್ಮಿ (ಪಿಎಲ್ಎ) ಜೊತೆಗೆ 70 ದಿನಗಳ ಕಾಲ ಸಂಘರ್ಷ ನಡೆದಿತ್ತು. ಈಗ ದೋಕ್ಲಾಂ ಪ್ರಸ್ಥಭೂಮಿಯಿಂದ 30 ಕಿಮೀ ದೂರದಲ್ಲಿರುವ ಭೂತಾನ್ ನಲ್ಲಿ ಚೀನಾ ವಿವಾದಿತ ಪ್ರದೇಶದಲ್ಲಿ ಗ್ರಾಮಗಳನ್ನು ನಿರ್ಮಾಣ ಮಾಡುತ್ತಿದೆ.

Edited By : Nirmala Aralikatti
PublicNext

PublicNext

15/01/2022 02:46 pm

Cinque Terre

77.04 K

Cinque Terre

6

ಸಂಬಂಧಿತ ಸುದ್ದಿ