ಲಕ್ನೋ: ಉತ್ತರ ಪ್ರದೇಶ ಚುನಾವಣೆಗೆ ಸುಮಾರು ಒಂದು ತಿಂಗಳ ಮೊದಲು, ಆಡಳಿತ ಪಕ್ಷ ಬಿಜೆಪಿ ನಾಯಕರು ರಾಜೀನಾಮೆ ನೀಡುವುದು ನಿಲ್ಲುತ್ತಿಲ್ಲ. ಹೀಗೆ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಸಂಪುಟಕ್ಕೆ ಇತ್ತೀಚೆಗೆ ರಾಜೀನಾಮೆ ನೀಡಿದ ಉತ್ತರ ಪ್ರದೇಶದ ಮಾಜಿ ಸಚಿವರಾದ ಸ್ವಾಮಿ ಪ್ರಸಾದ್ ಮೌರ್ಯ ಮತ್ತು ಧರಂ ಸಿಂಗ್ ಸೈನಿ ಅವರು ಇಂದು (ಶುಕ್ರವಾರ) ಸಮಾಜವಾದಿ ಪಕ್ಷಕ್ಕೆ ಸೇರಿದ್ದಾರೆ.
ಮೌರ್ಯ ಅವರ ನಿರ್ಗಮನದ ನಂತರ ಪಕ್ಷವನ್ನು ತೊರೆದ ಬಿಜೆಪಿಯ ಮಾಜಿ ಶಾಸಕರಾದ ಭಗವತಿ ಸಾಗರ್, ವಿನಯ್ ಶಾಕ್ಯಾ, ರೋಷನ್ ಲಾಲ್ ವರ್ಮಾ, ಮುಖೇಶ್ ವರ್ಮಾ ಮತ್ತು ಬ್ರಜೇಶ್ ಕುಮಾರ್ ಪ್ರಜಾಪತಿ ಕೂಡ ಎಸ್‌ಪಿಗೆ ಸೇರಿದ್ದಾರೆ. ಯುಪಿಯಲ್ಲಿ ಫೆಬ್ರವರಿ ಮತ್ತು ಮಾರ್ಚ್‌ನಲ್ಲಿ ವಿಧಾನಸಭೆ ಚುನಾವಣೆ ನಿಗದಿಯಾಗಿದೆ.
PublicNext
14/01/2022 04:19 pm