ಕಲಬುರಗಿ:ಚೀನಾ ಮತ್ತು ಪಾಕಿಸ್ತಾನ್ ಆಕ್ರಮಿತ ಕಾಶ್ಮೀರದ ಭೂಭಾಗವನ್ನ ಕೇಂದ್ರ ಸರ್ಕಾರ ವಾಪಾಸ್ ಪಡೆಯಲೇಬೇಕು ಅಂತಲೇ
RSS ಸರಸಂಘಚಾಲಕ ಮೋಹನ್ ಭಾಗವತ್ ಕೇಂದ್ರ ಸರ್ಕಾರಕ್ಕೆ ಖಡಕ್ ಆಗಿಯೇ ಹೇಳಿದ್ದಾರೆ.
ಪಾಕಿಸ್ತಾನ ಮತ್ತು ಚೀನಾದ ಕಿವಿ ಹಿಂಡಿಯಾದರೂ ಸರಿ. ಮಾತುಕತೆ ಮೂಲಕವಾದರೂ ಓಕೆ.ಸರ್ಕಾರವೇ ಸೂಕ್ತ ಮಾರ್ಗೋಪಾಯವನ್ನ ರೂಪಿಸಿ ಈ ಕೆಲಸವನ್ನ ಮಾಡಲೇಬೇಕು ಅಂತಲೇ ತಿಳಿಸಿದ್ದಾರೆ ಮೋಹನ್ ಭಾಗವತ್.
ಜೇವರ್ಗಿ ರಸ್ತೆಯ ಖಮೀತ್ಕರ್ ನಲ್ಲಿ ನಡೆದ ಗಣ್ಯರೊಂದಿಗಿನ ಸಂವಾದ ಗೋಷ್ಠಿಯಲ್ಲಿ ಈ ಮಾತುಗಳನ್ನ ಹೇಳಿದ್ದಾರೆ ಮೋಹನ್ ಭಾಗವತ್.
PublicNext
14/01/2022 07:26 am