ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕೋವಿಡ್ ಹತೋಟಿಗಾಗಿ ಪ್ರಧಾನಿ ಎಲ್ಲ ರೀತಿಯ ಪ್ರಯತ್ನ ಮಾಡ್ತಿದ್ದಾರೆ: ದೇವೇಗೌಡ

ಬೆಂಗಳೂರು: ಒಮಿಕ್ರಾನ್ ಸೋಂಕಿನೊಂದಿಗೆ ಕೊರೊನಾ ಭೀತಿ ಮತ್ತೆ ಹೆಚ್ಚಾಗಿದೆ. ಇದರಿಂದ ಅನೇಕರು ಬಲಿಯಾಗುತ್ತಿದ್ದಾರೆ‌. ತಜ್ಞರು ಏನ್ ಹೇಳ್ತಾರೋ ಅದನ್ನ ಮಾಡೋಣ. ಕೊರೊನಾ ನಿಯಂತ್ರಣಕ್ಕಗಿ ಪ್ರಧಾನಿ ಮೋದಿಯವರು ತಮ್ಮ ಕೈಲಾದ ಪ್ರಯತ್ನ ಮಾಡ್ತಿದ್ದಾರೆ ಎಂದು ಮಾಜಿ ಪ್ರಧಾನಿ ಹೆ‍ಚ್.ಡಿ ದೇವೇಗೌಡ ಹೇಳಿದ್ದಾರೆ.

ಬೆಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕೊರೊನಾ ಕಂಟ್ರೋಲ್ ವಿಚಾರವಾಗಿ ಮೋದಿ ಪರ ಬ್ಯಾಟಿಂಗ್ ಮಾಡಿದ್ದಾರೆ. ಇನ್ನು ಮೇಕೆದಾಟು ಪಾದಯಾತ್ರೆ ಬಗ್ಗೆ ಮಾತನಾಡಿದ ಅವರು, ಈ ವಿಚಾರ ಸುಪ್ರೀಂ ಕೋರ್ಟ್‌ನಲ್ಲಿದೆ. ಪಾದಯಾತ್ರೆ ಹೆಸರಲ್ಲಿ ಯಾರು ಯಾರನ್ನೂ ಮುಗಿಸಲು ಸಾಧ್ಯವಿಲ್ಲ. ಎಲ್ಲ ಭಗವಂತನ ಅಣತಿಯಂತೆ ನಡೆಯುತ್ತದೆ‌. ರಾಷ್ಟ್ರೀಯ ಪಕ್ಷಗಳು ಜಾಹೀರಾತು ಕೊಟ್ಟಿರೋದನ್ನೂ ನೋಡಿದ್ದೇನೆ. ಈ ಬಗ್ಗೆ ನಾನು ಹೆಚ್ಚು ಮಾತಾಡಲ್ಲ ಎಂದಿದ್ದಾರೆ.

Edited By : Nagaraj Tulugeri
PublicNext

PublicNext

13/01/2022 06:21 pm

Cinque Terre

99.76 K

Cinque Terre

7

ಸಂಬಂಧಿತ ಸುದ್ದಿ