ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಯು.ಪಿ ನಲ್ಲಿ ರಾಜೀನಾಮೆ ಪರ್ವ : ಇಂದು ಮತ್ತೊಬ್ಬ ಒಬಿಸಿ ನಾಯಕ ರಾಜೀನಾಮೆ

ಲಖನೌ: ಉತ್ತರ ಪ್ರದೇಶದ ರಾಜಕೀಯಲ್ಲಿ ರಾಜೀನಾಮೆ ಪರ್ವ ಶುರುವಾಗಿದೆ. ಇನ್ನೇನು ಚುನಾವಣೆ ಸಮೀಪಿಸುತ್ತಿರುವ ಬೆನ್ನಲ್ಲೇ ಬಿಜೆಪಿ ಪಾಳ್ಯಕ್ಕೆ ಭಾರಿ ಹೊಡೆತ ಬೀಳುತ್ತಿದೆ. ಯೋಗಿ ಆದಿತ್ಯನಾಥ್ ಸಂಪುಟದ ಸದಸ್ಯ, ಇನ್ನೊಬ್ಬ ಒಬಿಸಿ ಮುಖಂಡ ಧರಮ್ ಸಿಂಗ್ ಸೈನಿ, ರಾಜ್ಯ ಸಂಪುಟಕ್ಕೆ ರಾಜೀನಾಮೆ ನೀಡಿದ್ದಾರೆ.

ಸಹರಾನ್ಪುರ ಕ್ಷೇತ್ರದಿಂದ ನಾಲ್ಕು ಬಾರಿ ಶಾಸಕರಾಗಿ ಆಯ್ಕೆಯಾಗಿರುವ ಸೈನಿ, ಕಳೆದ ಮೂರು ದಿನಗಳಲ್ಲಿ ರಾಜೀನಾಮೆ ನೀಡಿರುವ ಮೂರನೇ ಸಚಿವರಾಗಿದ್ದಾರೆ. ಹಾಗೆಯೇ ಮಹತ್ವದ ವಿಧಾನಸಭೆ ಚುನಾವಣೆಗೂ ಮುನ್ನ ಆಡಳಿತಾರೂಢ ಬಿಜೆಪಿಗೆ ಆಘಾತ ನೀಡಿರುವ ಎಂಟನೇ ಶಾಸಕರಾಗಿದ್ದಾರೆ.

ಮಂಗಳವಾರ ರಾಜ್ಯ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ಹಿಂದುಳಿದ ವರ್ಗಗಳ ಮುಖಂಡ ಸ್ವಾಮಿ ಪ್ರಸಾದ್ ಮೌರ್ಯ ಅವರೊಂದಿಗೆ 2016ರಲ್ಲಿ ಬಹುಜನ ಸಮಾಜ ಪಕ್ಷ ತೊರೆದು ಸೈನಿ ಅವರೂ ಬಿಜೆಪಿ ಸೇರ್ಪಡೆಯಾಗಿದ್ದರು. ಆದಿತ್ಯನಾಥ್ ಸರ್ಕಾರದಲ್ಲಿ ಆಯುಷ್, ಆಹಾರ ಭದ್ರತೆ ಮತ್ತು ಔಷಧ ಆಡಳಿತದ ಸ್ವತಂತ್ರ ರಾಜ್ಯ ಖಾತೆಯನ್ನು ನಿರ್ವಹಿಸುತ್ತಿದ್ದರು.

Edited By : Nirmala Aralikatti
PublicNext

PublicNext

13/01/2022 03:59 pm

Cinque Terre

53.89 K

Cinque Terre

12

ಸಂಬಂಧಿತ ಸುದ್ದಿ