ರಾಮನಗರ:ಇದು ಅಂತ್ಯ ಅಲ್ಲ. ತಾತ್ಕಾಲಿಕ ಸ್ಥಗಿತ.ಎಲ್ಲಿ ಬಿಟ್ಟಿದ್ದೇವೋ ಅಲ್ಲಿಂದಲೇ ಪಾದಯಾತ್ರೆ ಆರಂಭ.ಹೀಗಂತ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಹೇಳಿಕೆ ಕೊಟ್ಟಿದ್ದಾರೆ.
ಪಾದಯಾತ್ರೆ ಸ್ಥಗಿತಗೊಳಿಸಿ ಅಂತ ಹೈಕಮಾಂಡ್ ಸೂಚಿಸಿದ ಮೇಲೆ ರಾಜ್ಯದ ಕಾಂಗ್ರೆಸ್ ಮುಖಂಡರು ಸಭೆ ನಡೆಸಿದರು. ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ಜೊತೆ ಜೊತೆಗೇನೆ ಸಭೆ ನಡೆಸಿ ಪಾದಯಾತ್ರೆ ಸ್ಥಗಿತದ ನಿರ್ಧಾರ ತೆಗೆದುಕೊಂಡರು.
ಸಭೆ ಬಳಿಕ ಮಾತನಾಡಿದ ಡಿಕೆ ಶಿವಕುಮಾರ್, ಖಡಕ್ ಆಗಿಯೇ ಹೇಳಿಕೊಟ್ಟಿದ್ದಾರೆ. ನಮ್ಮ ಹೋರಾಟ ಇಲ್ಲಿಗೆ ನಿಲ್ಲೋದಿಲ್ಲ. ಕೋವಿಡ್ ಮುಗಿದ ಬಳಿಕ ಮತ್ತೆ ನಮ್ಮ ಪಾದಯಾತ್ರೆ ಮುಂದುವರೆಯುತ್ತದೆ. ರಾಮನಗರದಿಂದಲೇ ನಮ್ಮ ಹೋರಾಟ ಮತ್ತೆ ಶುರು ಆಗುತ್ತದೆ ಎಂದು ಈಗಲೇ ಹೇಳಿಬಿಟ್ಟಿದ್ದಾರೆ ಡಿಕೆ ಶಿವಕುಮಾರ್.
PublicNext
13/01/2022 01:38 pm