ಬೆಂಗಳೂರು:ಕಾಂಗ್ರೆಸ್ ಪಕ್ಷದ ಮೇಕೆದಾಟು ಪಾದಯಾತ್ರೆಗೆ ಸರ್ಕಾರ ನಿಷೇಧ ಹೇರಿದೆ. ಹೈಕೋರ್ಟ್ ಚಾಟಿ ಬೀಸಿದ ಮೇಲೇನೆ ಸರ್ಕಾರ ಈ ನಿರ್ಧಾರ ತೆಗೆದುಕೊಂಡಿದೆ. ಆದರೆ ಕಾಂಗ್ರೆಸ್ ಪಕ್ಷದ ಡಿಕೆ ಶಿವಕುಮಾರ್, ಏನೆ ಆಗಲಿ ಏನೇ ಬರಲಿ ನಾವು ಪಾದಯಾತ್ರೆ ಮುಂದುವರೆಸುತ್ತೇವೆ ಅಂತಲೇ ಖಡಕ್ ಆಗಿಯೇ ಹೇಳಿ ಬಿಟ್ಟಿದ್ದಾರೆ.
ಮೊನ್ನೆಯಿಂದಲೇ ಶುರು ಆಗಿರೋ ಕಾಂಗ್ರೆಸ್ ಪಕ್ಷದ ಪಾದಯಾತ್ರೆ ಈಗ ರಾಮನಗರ ತಲುಪಿದೆ. ಇಲ್ಲಿಂದ ಬೆಂಗಳೂರು ಕಡೆಗೂ ಬರ್ತಾಯಿದೆ. ಆದರೆ ಸರ್ಕಾರ ಪಾದಯಾತ್ರೆ ಸ್ಟಾಪ್ ಮಾಡಿ ಅಂತಲೇ ಬುಧವಾರ ರಾತ್ರಿ ಆದೇಶ ನೀಡಿದೆ.
ಇದರ ಬೆನ್ನಲ್ಲಿಯೇ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ರಾಮನಗರದಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ. ನಿಗದಿತ ಅವಧಿಯ ಪಾದಯಾತ್ರೆಯನ್ನ ಕೈ ಬಿಡೋದಿಲ್ಲ. ಮುಂದುವರಿಸಿಯೇ ತೀರುತ್ತೇವೆ ಅಂತಲೇ ಹೇಳಿಬಿಟ್ಟಿದ್ದಾರೆ.
ಇದರಿಂದ ರಾಮನಗರದಿಂದ ಬೆಂಗಳೂರು ಕಡೆಗೆ ಬರ್ತಿರೋ ಈ ಪಾದಯಾತ್ರೆಯ ಭವಿಷ್ಯ ಏನಾಗುತ್ತದೆ ಅನ್ನೋ ಕುತೂಹಲವೂ ಈಗಲೇ ಮೂಡಿದೆ.
PublicNext
13/01/2022 09:53 am