ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮತದಾರರನ್ನು ಕರೆದೊಯ್ಯಲು ಲೋಹದ ಹಕ್ಕಿ ವ್ಯವಸ್ಥೆ!

ಡೆಹ್ರಾಡೂನ್: ಪಂಚ ರಾಜ್ಯಗಳ ಚುನಾವಣೆ ಘೋಷಣೆಯಾದ ಬೆನ್ನಲ್ಲೇ ರಾಜಕೀಯ ಚಟುವಟಿಕೆಗಳು ಗರಿಗೆದರಿವೆ. ಸದ್ಯ 2022ರ ಉತ್ತರಾಖಂಡ ವಿಧಾನಸಭಾ ಚುನಾವಣೆಯಲ್ಲಿ ರಾಜ್ಯದ ಹಿಮ ಮತ್ತು ದುರ್ಗಮ ಪ್ರದೇಶಗಳ ಜನರು ಸುಲಭವಾಗಿ ಮತ ಚಲಾಯಿಸಲು ಅನೇಕ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ.

ಉತ್ತರಾಖಂಡದ ಹಿಮಭರಿತ ಪ್ರದೇಶದಲ್ಲಿ ವಾಸಿಸುವ ಕಾರ್ಮಿಕರಿಗೆ ಮತದಾನ ಮಾಡಲು ಹೆಲಿಕಾಪ್ಟರ್ ಸೌಲಭ್ಯವನ್ನು ನೀಡಲಾಗುತ್ತಿದೆ.

ಈ ಕಾರ್ಮಿಕರು ಪ್ರಥಮ ಬಾರಿಗೆ ಹೆಲಿಕಾಪ್ಟರ್ ಮೂಲಕ ಮತ ಚಲಾಯಿಸಲು ತೆರಳಲಿದ್ದಾರೆ. ಭಾರೀ ಹಿಮಪಾತದಿಂದಾಗಿ ಭಾರತ-ಚೀನಾ ಗಡಿಯಲ್ಲಿ ನಿರ್ಮಿಸಲಾಗುತ್ತಿರುವ ರಸ್ತೆಗಳಲ್ಲಿ ಕೆಲಸ ಮಾಡುವ ಸುಮಾರು ನೂರು ಕಾರ್ಮಿಕರಿಗೆ ಬಾರ್ಡರ್ ರೋಡ್ ಆರ್ಗನೈಸೇಶನ್ (BRO) ಈ ಸೌಲಭ್ಯವನ್ನು ಒದಗಿಸಲಿದೆ.

ಪ್ರತಿಯೊಬ್ಬ ಕಾರ್ಯಕರ್ತನನ್ನು ಮತಗಟ್ಟೆಗೆ ಕರೆದೊಯ್ಯುವುದು ತಮ್ಮ ಪ್ರಯತ್ನವಾಗಿದೆ ಎಂದು ಬಿಆರ್ ಒ ಅಧಿಕಾರಿಗಳು ಹೇಳಿದ್ದಾರೆ.

ಫೆಬ್ರವರಿ 14 ರಂದು ಉತ್ತರಾಖಂಡದಲ್ಲಿ ವಿಧಾನಸಭಾ ಚುನಾವಣೆಯ ಮತದಾನ ನಡೆಯಲಿದೆ.

Edited By : Nirmala Aralikatti
PublicNext

PublicNext

12/01/2022 09:42 pm

Cinque Terre

86.66 K

Cinque Terre

3

ಸಂಬಂಧಿತ ಸುದ್ದಿ