ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಪಂಜಾಬ್‌ನಲ್ಲಿ ಕೇಜ್ರಿವಾಲ್ ಸುಳ್ಳುಗಳ ಮಾರಾಟ ಮಾಡ್ತಿದ್ದಾರೆ: ಸಿಧು ಆರೋಪ

ಅಮೃತಸರ್: ಪಂಜಾಬ್‌ನಲ್ಲಿ ಚುನಾವಣಾ ಸಿದ್ಧತೆಗಾಗಿ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ‘ಸುಳ್ಳುಗಳ ಮಾರಾಟ’ ಮಾಡುತ್ತಿದ್ದಾರೆ ಎಂದು ಪಂಜಾಬ್ ಕಾಂಗ್ರೆಸ್ ಮುಖ್ಯಸ್ಥ ನವಜೋತ್ ಸಿಂಗ್ ಸಿಧು ಆರೋಪಿಸಿದ್ದಾರೆ.

ಖಾಸಗಿ ವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಕೇಜ್ರಿವಾಲ್ ಇತ್ತೀಚೆಗಷ್ಟೇ ಪಂಜಾಬ್‌ಗೆ ಭೇಟಿ ನೀಡಿದ ಬಗ್ಗೆ ಮಾತನಾಡಿದ ಸಿಧು ಈ ಮಾತು ಹೇಳಿದ್ದಾರೆ. ಪಂಜಾಬ್‌ನಲ್ಲಿ ಕೇಜ್ರಿವಾಲ್ ಸುಳ್ಳುಗಳನ್ನು ಮಾರಾಟ ಮಾಡುತ್ತಿದ್ದಾರೆ ಮತ್ತು ಆಮ್ ಆದ್ಮಿ ಪಕ್ಷದ ಸುಳ್ಳುಗಳನ್ನು ಬಹಿರಂಗಪಡಿಸಿದ್ದಾರೆ. ಕಾಂಗ್ರೆಸ್ ಎಎಪಿಯಂತಹ ನಿರಂಕುಶ ಪಕ್ಷವಲ್ಲ. ರಾಜ್ಯದಲ್ಲಿ ಡ್ರಗ್ಸ್ ಹಾವಳಿ ಬಗ್ಗೆ ಮಾತನಾಡಲು ಕೇಜ್ರಿವಾಲ್‌ಗೆ ಸಾಧ್ಯವಿಲ್ಲ. ಡ್ರಗ್ಸ್ ಮಾಫಿಯಾ ಮುಂದೆ ಅವರೇ ಶರಣಾಗಿದ್ದರು” ಎಂದು ಸಿಧು ಆರೋಪಿಸಿದ್ದಾರೆ.

Edited By : Nagaraj Tulugeri
PublicNext

PublicNext

12/01/2022 08:50 pm

Cinque Terre

57.29 K

Cinque Terre

2

ಸಂಬಂಧಿತ ಸುದ್ದಿ