ಬೆಂಗಳೂರು: ನಾಳೆ ನಮ್ಮ ಪಾದಯಾತ್ರೆ ಎಂದಿನಂತೆ ನಡೆಯುತ್ತದೆ. ಸರ್ಕಾರಕ್ಕೆ ತಿಳಿಸಿಯೇ ನಾವು ಪಾದಯಾತ್ರೆ ಮಾಡಿದ್ದೇವೆ.ಕೋರ್ಟ್ ಆದೇಶವನ್ನ ನಾವು ಗೌರವಿಸುತ್ತೇವೆ. ಜನವರಿ-14ಕ್ಕೆ ಯಾವುದೇ ಆದೇಶವನ್ನ ನೀಡಿದ್ರೂ ನಾವು ಪಾಲಿಸುತ್ತೇವೆ ಎಂದೇ ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ನಾಳೆ ಪಾದಯಾತ್ರೆ ನಡೆಯಲಿದೆ.ಬೆನ್ನು ನೋವಿರೋ ಕಾರಣಕ್ಕೇನೆ ಈಗ ಬೆಂಗಳೂರಿಗೆ ಬಂದಿದ್ದೇನೆ. ಕೋವಿಡ್ ರೂಲ್ಸ್ ಉಲ್ಲಂಘನೆಗೆ ಸಂಬಂಧಿಸಿದಂತೆ ಕೂಡ ಸಿದ್ದರಾಮಯ್ಯ ಮಾತನಾಡಿದ್ದಾರೆ.
ಹೌದು.ಕೋವಿಡ್ ರೂಲ್ಸ್ ಉಲ್ಲಂಘಟನೆ ಬಗ್ಗೆ ಕೇಳಲಾಗಿದೆ. ಆದರೆ ಇದು ನಮಗೆ ಕೇಳಿದ ಪ್ರಶ್ನೆ ಅಲ್ಲವೇ ಅಲ್ಲ.ಇದು ಹೈಕೋರ್ಟ್ ಸರ್ಕಾರವನ್ನ ಕೇಳಿದ ಪ್ರಶ್ನೆ ಅಂತಲೇ ಸಿದ್ದರಾಮಯ್ಯ ಹೇಳಿಬಿಟ್ಟಿದ್ದಾರೆ.
PublicNext
12/01/2022 06:05 pm