ಗದಗ:ಲಾಕ್ ಡೌನ್ ಬಗ್ಗೆ ರಾಷ್ಟ್ರ ಮಟ್ಟದಲ್ಲೂ ಚಿಂತನೆ ನಡೆದಿದೆ ಲಾಕ್ ಡೌನ್ ಮಾಡಿದರೆ ಬಡವರ ಬದುಕು ಅಸಹನೀಯವಾಗಲಿದೆ.
ಬಡವರಿಗೆ, ಕಾರ್ಮಿಕರಿಗೆ ಅನುಕೂಲ ಮಾಡುವ ಬಗ್ಗೆ ಸರ್ಕಾರ ಚಿಂತಿಸಬೇಕಿದೆ ಎಂದು ಲಾಕ್ ಡೌನ್ ವಿಚಾರವಾಗಿ ಸರ್ಕಾರಕ್ಕೆ ಶಾಸಕ ಎಚ್ ಕೆ ಪಾಟೀಲ ಸಲಹೆ ನೀಡಿದ್ದಾರೆ.
ಲಾಕ್ ಡೌನ್ ಅನೌನ್ಸ್ ಮಾಡುವಾಗಲೇ ಪರಿಹಾರದ ಬಗ್ಗೆ ಘೋಷಣೆ ಮಾಡಬೇಕು, ಮುಖ್ಯಮಂತ್ರಿಗಳು ಕೊರೊನಾ ಸೋಂಕಿನಿಂದ ಬಳಲುತ್ತಿದ್ದಾರೆ. ಅವರು ಬಹುಬೇಗ ಗುಣಮುಖವಾಗಲಿ ಎಂದು ಹಾರೈಸುತ್ತೇನೆ ಎಂದರು.
ಇನ್ನೂ ಮೆಕೆದಾಟು ಪಾದಯಾತ್ರೆ ವಿಚಾರ ಮಾತನಾಡಿದ ಇವರು, ಮೇಕೆದಾಟು ವಿಚಾರಕ್ಕೆ ಸರ್ಕಾರ ಸರ್ವ ಪಕ್ಷದ ಸಭೆ ಕರೆಯಲಿಲ್ಲ,
ಕೇಂದ್ರ ಸರ್ಕಾರಕ್ಕೆ ನಿಯೋಗ ತೆಗೆದುಕೊಂಡು ಹೋಗಲಿಲ್ಲ, ಕೆಲಸ ಪ್ರಾರಂಭ ಮಾಡಲಿಲ್ಲ ಮೇಕೆದಾಟು ಯೋಜನೆಯ ಕೆಲಸ ಪ್ರಾರಂಭ ಮಾಡಲಿಲ್ಲ ಹೀಗಾಗಿ ಪಾದಯಾತ್ರೆ ಮಾಡಬೇಕಾಯಿತು. ಪಾದಯಾತ್ರೆಯಲ್ಲಿ ಭಾಗಿಯಾದವರು ಮಾಸ್ಕ್, ಸ್ಯಾನಿಟೈಜೇಷನ್ ಮಾಡಿದ್ದಾರೆ ಎಂದು ಸ್ಪಷ್ಟೀಕರಣ ಕೊಟ್ಟರು.
ಪಾದಯಾತ್ರೆಯಲ್ಲಿ ಕೇಸ್ ಮಾಡಿದವರಿಗೆ ಕೇಸ್ ದಾಖಲಾಗಿದ್ದು ಕಾನೂನಾತ್ಮಕ ಹೋರಾಟ ಮಾಡ್ತೀವಿ, ಕೊರೊನಾ ಹಬ್ಬಿಸುವುದು ಯಾರ ಇಚ್ಛೆ ಇರುವುದಿಲ್ಲ ಆದ್ರೆ, ರಾಜಕೀಯದ ಅನಿವಾರ್ಯದ ಪ್ರಸಂಗ ತಂದಿದ್ದು ಬಿಜೆಪಿ ಎಂದರು.
PublicNext
12/01/2022 04:48 pm