ರಾಯ್ಪುರ : ಛತ್ತೀಸ್ ಗಢ ಮುಖ್ಯಮಂತ್ರಿ ಭೂಪೇಶ್ ಬಾಗೆಲ್ ಅವರ ತಂದೆ ನಂದ ಕುಮಾರ್ ಬಾಗೆಲ್ ದಯಾಮರಣ ಕೋರಿ ರಾಷ್ಟ್ರಪತಿಗೆ ಪತ್ರ ಬರೆದು ಸುದ್ದಿಯಾಗಿದ್ದಾರೆ. ಈ ಹಿಂದೆ ಬ್ರಾಹ್ಮಣರ ವಿರುದ್ಧ ಅವಹೇಳನಕಾರಿಯಾಗಿ ಮಾತನಾಡಿ ಜೈಲು ಪಾಲಾಗಿದ್ದ ಅವರು ಈಗ ದಯಾಮರಣ ಕೇಳಿರುವುದಕ್ಕೆ ಕಾರಣ ಕೂಡ ರಾಜಕೀಯ ಉದ್ದೇಶದ ಕುರಿತಾಗಿಯೇ ಇದೆ.
ಮುಂಬರುವ ಚುನಾವಣೆಗಳಲ್ಲಿ ಬ್ಯಾಲಟ್ ಪೇಪರ್ ಗಳನ್ನು ಜಾರಿಗೆ ತರಬೇಕು ಎಂದು ಅವರು ಒತ್ತಾಯ ಮಾಡಿದ್ದು, ಹಾಗೇನಾದರೂ ಇದು ಈಡೇರದ ಇದ್ದ ಪಕ್ಷದಲ್ಲಿ ತಮಗೆ ದಯಾಮರಣ ನೀಡಬೇಕು ಎಂದು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರಿಗೆ ಪತ್ರ ಬರೆದಿದ್ದಾರೆ.
ಇವಿಎಂ ಮೂಲಕ ನಡೆಸುವ ಮತದಾನದ ಮೇಲೆ ನಮಗೆ ಸಾಕಷ್ಟು ಅನುಮಾನಗಳಿವೆ. ಹಾಗಾಗಿ ಮತಪತ್ರಗಳ ಮೂಲಕ ಚುನಾವಣೆ ನಡೆಸಬೇಕು. ಇಲ್ಲದೇ ಇದ್ದಲ್ಲಿ ದಯಾಮರಣವನ್ನು ನೀಡಬೇಕು ಎಂದು ಹೇಳಿದ್ದಾರೆ.
''ದೇಶದ ನಾಗರಿಕರ ಎಲ್ಲಾ ಸಾಂವಿಧಾನಿಕ ಹಕ್ಕುಗಳು ದೊಡ್ಡ ಮಟ್ಟದಲ್ಲಿ ಉಲ್ಲಂಘನೆಯಾಗುತ್ತಿವೆ. ಪ್ರಜಾಪ್ರಭುತ್ವದ ಮೂರು ಆಧಾರ ಸ್ತಂಭಗಳಾದ ಶಾಸಕಾಂಗ, ನ್ಯಾಯಾಂಗ ಮತ್ತು ಕಾರ್ಯಾಂಗ ನಾಶವಾಗುತ್ತಿದೆ.ಮಾಧ್ಯಮಗಳೂ ಪ್ರಜಾಪ್ರಭುತ್ವದ ಮೂರು ಸ್ತಂಭಗಳ ಆಶಯದಂತೆ ಕೆಲಸ ಮಾಡುತ್ತಿವೆ. ದೇಶದ ನಾಗರಿಕರ ಬಗ್ಗೆ ಯಾರೂ ಗಮನ ಹರಿಸುತ್ತಿಲ್ಲ, ನಾಗರಿಕರಲ್ಲಿ ಭಯದ ಭಾವನೆ ಇದೆ, ಎಂದುರಾಷ್ಟ್ರಪತಿಗೆ ಬರೆದಿರುವ ಪತ್ರದಲ್ಲಿ ತಿಳಿಸಿದ್ದಾರೆ.
PublicNext
11/01/2022 07:04 pm