ಬೆಂಗಳೂರು: ಡಿಕೆ ಶಿವಕುಮಾರ್ ಅವ್ರೇ ಹೊನ್ನಾಳಿ ಭದ್ರ ಕೋಟೆಯನ್ನ ಭೇದಿಸೋಕೆ ನಿಮಗೆ ಆಗೋದಿಲ್ಲ. ಹೊನ್ನಾಳಿಯ ನ್ಯಾಮತಿ ಅಭಿಮಾನಿಗಳು ಕೋಟೆ ಕಟ್ಟಿ ನನ್ನ ರಕ್ಷೆಣೆ ಮಾಡಿದ್ದಾರೆ ಎಂದು ಹೊನ್ನಾಳಿ ಶಾಸಕ ರೇಣುಕಾಚಾರ್ಯ ಹೇಳಿದ್ದಾರೆ.
ಹೌದು ನಿನ್ನೆಯ ಹೋರಿ ಬೆದರಿಸೋ ಕಾರ್ಯಕ್ರಮದಲ್ಲಿ ಶಾಸಕ ರೇಣುಕಾಚಾರ್ಯ ಕೋವಿಡ್ ನಿಯಮ ಉಲ್ಲಂಘಿಸಿದ್ದರು. ಅದಕ್ಕೆ ಡಿಕೆ ಶಿವಕುಮಾರ್ ಕಾಮೆಂಟ್ ಮಾಡಿದ್ದರು. ರೇಣುಕಾಚಾರ್ಯ ಅವರೇ ಇದನ್ನೆ ಮಾಡಿಸಿದ್ದಾರೆ. ತಾವೇ ವೀಡಿಯೋ ಕೂಡ ಮಾಡಿಸಿದ್ದಾರೆ ಅಂತಲೇ ಟೀಕಿಸಿದ್ದರು.
ಈ ಒಂದು ಟೀಕೆಗೇನೆ ರಾಂಗ್ ಆಗಿರೋ ಶಾಸಕ ರೇಣುಕಾಚಾರ್ಯ ಅವ್ರು,ವಿಕಾಸಸೌಧದ ಕಚೇರಿಯಲ್ಲಿ ಮಾನಾಡಿದ್ದಾರೆ.
ಡಿಕೆಶಿ ಅಣ್ಣ ನಿಮ್ಮ ಅವಧಿಯಲ್ಲಿ ನನ್ನ ಮೇಲೆ ಏನೆಲ್ಲ ಕೇಸ್ ಹಾಕಿಸಿದ್ದೀರಾ. ನನ್ನ ಬೆಂಕಿ ಹೆಚ್ಚಿ ಸುಡಲು ಪ್ರಯತ್ನ ಪಟ್ರಿ.ಆದರೆ ನಾನು ನನ್ನ ಕ್ಷೇತ್ರದ ಅಭಿಮಾನಕ್ಕಾಗಿಯೇ ಹೋರಿ ಬೆದರಿಸೋ ಕಾರ್ಯಕ್ರಮದಲ್ಲಿ ಭಾಗಿ ಆಗಿದ್ದೇ. ಅದಕ್ಕೆ ಇಡೀ ರಾಜ್ಯದ ಜನತೆಯ ಕ್ಷಮೆ ಕೇಳಿದ್ದೇನೆ. ಡಿಕೆಶಿ ಅಣ್ಣ ನೀವು ನಿಮ್ಮ ತಪ್ಪಿಗೆ ಕ್ಷಮೆ ಕೇಳಿ ಅಂತಲೇ ಹೇಳಿದ್ದಾರೆ ರೇಣುಕಾಚಾರ್ಯ.
PublicNext
11/01/2022 02:34 pm