ದಾವಣಗೆರೆ: ಕೋವಿಡ್ ಸಮಯದಲ್ಲಿ ಮೇಕೆದಾಟು ಪಾದಯಾತ್ರೆ ಬೇಕಿತ್ತಾ? ಇದು ಕೇವಲ ರಾಜಕೀಯ ಬೇಳೆ ಬೇಯಿಸಿಕೊಳ್ಳುವ ಯಾತ್ರೆ ಎಂದು ನಗರದಲ್ಲಿ ಬಿಜೆಪಿ ಸಂಸದ ಜಿಎಂ ಸಿದ್ದೇಶ್ವರ ಆಕ್ರೋಶ ಹೊರಹಾಕಿದ್ದಾರೆ.
ಮೇಕೆ ದಾಟು ವಿಚಾರದ ಬಗ್ಗೆ ತಮಿಳುನಾಡು ಸರ್ಕಾರ ಸುಪ್ರೀಂ ಕೋರ್ಟ್ ಮೊರೆ ಹೋಗಿದೆ. ಈಗ ತಮಿಳು ನಾಡಿನಲ್ಲಿ ಕಾಂಗ್ರೆಸ್ ಡಿಎಂಕೆ ಸರ್ಕಾರ ಇದೆ. ಅಲ್ಲಿ ಹೇಳಿ ಕೋರ್ಟ್ ಕೇಸ್ ಹಿಂದಕ್ಕೆ ಪಡೆಯಲಿ.ನಾವು ಕೇಂದ್ರ ಸರ್ಕಾರದ ಮೇಲೆ ಒತ್ತಡ ತರುತ್ತೇವೆ. ಅದನ್ನು ಬಿಟ್ಟು ಜನರಲ್ಲಿ ತಪ್ಪು ಭಾವನೆ ಹರಡಿಸುವ ಸಲುವಾಗಿ ಪಾದಯಾತ್ರೆ ಮಾಡಲಾಗುತ್ತಿದೆ ಎಂದು ತೀವ್ರವಾಗಿ ಖಂಡಿಸಿದರು.
PublicNext
10/01/2022 01:14 pm