ಬಳ್ಳಾರಿ: ಸರ್ಕಾರಿ ಶಾಲೆಗಳಲ್ಲಿ ಮಕ್ಕಳಿಗೆ ಮೊಟ್ಟೆ ನೀಡುವುದಕ್ಕೆ ಪರ-ವಿರೋಧ ಚರ್ಚೆ ನಡೀತಾನೇ ಇದೆ. ಆದರೆ ಈಗ ಮೊಟ್ಟೆಯನ್ನ ಕೊಡಲೇಬಾರದು ಅಂತಲೇ ಅಖಿಲ ಭಾರತ ಸಸ್ಯಾಹಾರಿ ಒಕ್ಕೂಟದಿಂದ ಬಳ್ಳಾರಿಯ ಡಿಸಿ ಕಚೇರಿ ಮುಂದೆ ಪ್ರತಿಭಟನೆ ಮಾಡಲಾಗಿದೆ.
ಮಕ್ಕಳಿಗೆ ತರಾಕಾರಿ,ಕಾಳು ,ಸಸ್ಯಾಹಾರಿ ಮಾತ್ರ ಕೊಡಬೇಕು ಅಂತಲೇ ಪ್ರತಿಭಟನಾಕಾರರು ಆಗ್ರಹಿಸಿದ್ದಾರೆ. ದಯಾನಂದ ಸ್ವಾಮೀಜಿ ನೇತೃತ್ವದಲ್ಲಿಯೇ ಈ ಪ್ರತಿಭಟನೆ ನಡೆದಿದೆ. ಶಾಲಾ ಮಕ್ಕಳಿಗೆ ಮೊಟ್ಟೆ ನೀಡ್ತಿರೋ ಯೋಜನೆಯನ್ನ ಹಿಂಪಡೆಯಬೇಕು ಅಂತಲೇ ಆಗ್ರಹಿಸಲಾಗಿದೆ.
PublicNext
10/01/2022 01:05 pm