ರಾಮನಗರ: ಮೇಕೆದಾಟು ಯೋಜನೆ ಜಾರಿಗೆ ಆಗ್ರಹಿಸಿ ಕಾಂಗ್ರೆಸ್ ಪಕ್ಷದಿಂದ ವಾರಾಂತ್ಯ ಕರ್ಫ್ಯೂ ನಡುವೆಯೂ ಪಾದಯಾತ್ರೆ ಕಾರ್ಯಕ್ರಮ ಭಾನುವಾರ (ಜನವರಿ 9) ಆರಂಭವಾಗಿದೆ. ಪಾದಯಾತ್ರೆಯ ಮುಂದಾಳತ್ವವನ್ನು ವಹಿಸಿಕೊಂಡಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಸುಸ್ತಾಗಿ ಮಾರ್ಗ ಮಧ್ಯದಲ್ಲಿಯೇ ಕುಳಿತಿದ್ದಾರೆ.
ಸಾವಿರಾರು ಕಾರ್ಯಕರ್ತರೊಡನೆ ಹೆಜ್ಜೆ ಹಾಕುತ್ತಿರುವ ಡಿ.ಕೆ.ಶಿವಕುಮಾರ್ ಇದುವರೆಗೂ 6 ಕಿ.ಮೀ ನಷ್ಟು ದಾರಿ ಕ್ರಮಿಸಿದ್ದಾರೆ. ಇದರಿಂದ ಸಾಕಷ್ಟು ಸುಸ್ತಾದ ಅವರು ಮಾರ್ಗ ಮಧ್ಯದಲ್ಲಿಯೇ ಕುಳಿತು ಅಲ್ಪ ವಿಶ್ರಾಂತಿ ಪಡೆದಿದ್ದಾರೆ. ಈ ವೇಳೆ ಅವರ ಜೊತೆಯಿದ್ದ ವೈದ್ಯರ ತಂಡ ಅವರಿಗೆ ಬಿಪಿ ಚೆಕ್ ಮಾಡಿದ್ದಾರೆ.
ಡಿಕೆ ಶಿವಕುಮಾರ್ ಅವರು ಸುಸ್ತಾಗಿ ರಸ್ತೆ ಬದಿಗೆ ಬಂದು ಕೂರುತ್ತಿದ್ದಂತೆ ಮುಗಿಬಿದ್ದ ಕಾರ್ಯಕರ್ತರು ಅವರಿಗೆ ಜ್ಯೂಸ್ ಕೊಟ್ಟಿದ್ದಾರೆ. ಜೊತೆಗೆ ಬೀಸಣಿಕೆಯಿಂದ ಗಾಳಿ ಬೀಸಿದ್ದಾರೆ.
PublicNext
09/01/2022 05:57 pm