ನವದೆಹಲಿ: ಪಂಜಾಬ್ ಭೇಟಿ ಸಮಯದಲ್ಲಿ ಆದ ಭದ್ರತಾ ಲೋಪವು ಪ್ರಧಾನಿ ನರೇಂದ್ರ ಮೋದಿ ಅವರನ್ನು ಮುಗಿಸಲು ನಡೆಸಿರುವ ಸಂಚು. ಈ ವೇಳೆ ಡ್ರೋನ್ ಅಥವಾ ಟೆಲಿಸ್ಕಾಪ್ ಗನ್ ಮೂಲಕ ಪ್ರಧಾನಿ ಮೋದಿ ಅವರನ್ನು ಹತ್ಯೆ ಮಾಡಲು ಸಂಚು ರೂಪಿಸಿರಬಹುದು ಎಂದು ಕೇಂದ್ರ ಸಚಿವ ಗಿರಿರಾಜ್ ಸಿಂಗ್ ಸ್ಫೋಟಕ ಹೇಳಿಕೆ ನೀಡಿದ್ದಾರೆ.
ಪ್ರಧಾನಿ ಮೋದಿ ಅವರು ಬೆಂಗಾವಲು ವಾಹನ ಮಧ್ಯೆ ಸಿಲುಕಿರುವ ಫೋಟೋ, ವಿಡಿಯೋಗಳನ್ನು ಕೂಡ ಗಿರಿರಾಜ್ ಸಿಂಗ್ ಪೋಸ್ಟ್ ಮಾಡಿದ್ದಾರೆ. ಜೊತೆಗೆ ಈ ಘಟನೆ ಬಗ್ಗೆ ಸಮಗ್ರ ತನಿಖೆಯಾಗಬೇಕು, ತಪ್ಪಿತಸ್ಥರು ಯಾರೇ ಆಗಿದ್ದರೂ ಸುಮ್ಮನೆ ಬಿಡಬಾರದು, ತಕ್ಕ ಶಾಸ್ತಿಯಾಗಬೇಕು ಎಂದು ಆಗ್ರಹಿಸಿದ್ದಾರೆ.
PublicNext
08/01/2022 09:30 pm