ಗದಗ: ಕಾಂಗ್ರೆಸ್ ಪಕ್ಷದ ಮೇಕೆದಾಟು ಯೋಜನೆಯ ಪಾದಯಾತ್ರೆಯನ್ನ ಶಾಸಕ ಎಚ್.ಕೆ.ಪಾಟೀಲ್ ಸರ್ಮರ್ಥಿಸಿಕೊಂಡಿದ್ದಾರೆ. ಕೋವಿಡ್ ನಿಯಮವನ್ನ ಪಾಲಿಸಿಕೊಂಡೇ ಈ ಪಾದಯಾತ್ರೆ ಮಾಡುತ್ತೇವೆ ಅಂತಲೂ ಹೇಳಿಕೊಂಡಿದ್ದಾರೆ.
ಕೋವಿಡ್ ನಿಯಮವನ್ನ ಉಲ್ಲಂಘಿಸಿಯೇ ಪಾದಯಾದ್ರೆ ಮಾಡುವ ಉದ್ದೇಶ ನಮ್ಮದಲ್ಲ. ಭಾನುವಾರವೇ ಪಾದಯಾತ್ರೆ ಮಾಡುವ ನಿರ್ಧಾರ ಮೊದಲೇ ತೆಗೆದುಕೊಳ್ಳಲಾಗಿತ್ತು. ಅದನ್ನೆ ಈಗ ಮಾಡುತ್ತಿದ್ದೇವೆ ಅಂತಲೇ ಎಚ್.ಕೆ.ಪಾಟೀಲ್ ವಿವರಿಸಿದ್ದಾರೆ.
ಪಾದಯಯಾತ್ರೆಯನ್ನ ಕೋವಿಡ್ ನಿಯಮದನುಸಾರವಾಗಿಯೇ ಮಾಡುತ್ತೇವೆ. ಸಾಮಾಜಿಕ ಅಂತರ ಕಾಯ್ದುಕೊಳ್ಳುತ್ತೇವೆ.ಮಾಸ್ಕ್ ಧರಿಸುತ್ತೇವೆ. ಅಷ್ಟೇ ಯಾಕೆ ? ಸ್ಯಾನಿಟೈಸರ್ ಕೂಡ ಬಳಸುತ್ತೇವೆ ಎಂದು ಎಚ್.ಕೆ.ಪಾಟೀಲ್ ಗದಗನಲ್ಲಿಂದು ತಿಳಿಸಿದ್ದಾರೆ.
PublicNext
07/01/2022 05:08 pm