ಕೋಲಾರ:ಕಾಂಗ್ರೆಸ್ ಪಕ್ಷದ ಮೇಕೆದಾಟು ಪಾದಯಾತ್ರೆಯ ಹೋರಾಟ ಒಂದು ನಾಟಕ. ಇದು ಒಂದು ರೀತಿ ಕಾಂಗ್ರೆಸ್ ಪಕ್ಷದ ಮೇಕೆ ನಾಟಕ ಅಂತಲೇ ಜಿಲ್ಲಾ ಉಸ್ತುವಾರಿ ಸಚಿವ ಮುನಿರತ್ನ ಕೋಲಾರದಲ್ಲಿ ಕಾಮೆಂಟ್ ಮಾಡಿದ್ದಾರೆ.
ಕಾಂಗ್ರೆಸ್ ನವರಿಗೆ ಮಾಡಲು ಏನೂ ಕೆಲಸವೇ ಇಲ್ಲ. ಅದಕ್ಕೇನೆ ಈ ನಾಟಕ ಶುರು ಮಾಡಿದ್ದಾರೆ. ಮುಂದೆ ಇವರ ಸರ್ಕಾರ ಬರೋದೇಯಿಲ್ಲ ಅಂತ ಅವರಿಗೆ ಗೊತ್ತಿದೆ. ಹಾಗಾಗಿಯೇ ಈ ನಾಟಕ ಶುರು ಮಾಡಿದ್ದಾರೆ ಅಂತಲೇ ಮುನಿರತ್ನ ಟೀಕಿಸಿದ್ದಾರೆ.
ಮೇಕೆದಾಟು ಯೋಜನೆಯ ಜಾರಿಯ ಹೋರಾಟ ಇಂದಿನದಲ್ಲ. ಅದು ಹಿಂದಿನ ಹೋರಾಟವೇ ಆಗಿದೆ. ಆದರೆ ತಮ್ಮ ಸರ್ಕಾರ ಅಧಿಕಾರದಲ್ಲಿದ್ದಾಗ ಏನೂ ಮಾಡದೇ ಇರೋ ಕಾಂಗ್ರೆಸ್ ಪಕ್ಷ ಈಗ ಕೋವಿಡ್ ಸಮಯದಲ್ಲಿ ಪಾದಯಾತ್ರೆ ಮಾಡೋಕೆ ಹೊರಟಿದೆ ಅಂತಲೂ ಮುನಿರತ್ನ ಟೀಕಿಸಿದ್ದಾರೆ.
PublicNext
07/01/2022 04:57 pm