ಪಂಜಾಬ್:ಇಡೀ ದೇಶದಲ್ಲಿ ಮೊನ್ನೆ ಪಂಜಾಬ್‌ನಲ್ಲಿ ಆದ ಪ್ರಧಾನಿ ಭದ್ರತಾ ಲೋಪದ ಬಗ್ಗೆ ಇಡೀ ದೇಶದಲ್ಲಿಯೇ ಚರ್ಚೆ ಆಗುತ್ತಿದೆ. ಪಂಜಾಬ್ ಸರ್ಕಾರವನ್ನ ಅನೇಕರೂ ಟೀಕಿಸುತ್ತಿದ್ದಾರೆ. ಸಿಎಂ ಚರಣ್‌ಜಿತ್ ಸಿಂಗ್ ಚೆನ್ನಿಯನ್ನೂ ಕಠುವಾಗಿಯೇ ಟೀಕಿಸುತ್ತಿದ್ದಾರೆ. ಆದರೆ ರಾಜ್ಯಸ್ಥಾನದ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಮಾತ್ರ ಚನ್ನಿ ಪರವಾಗಿಯೇ ಬ್ಯಾಟಿಂಗ್ ಮಾಡಿದ್ದಾರೆ. ಬನ್ನಿ, ಹೇಳ್ತೀವಿ.
ಚರಣ್‌ಜಿತ್ ಸಿಂಗ್ ಚೆನ್ನಿಯೊಬ್ಬ ದಲಿತ ಮುಖ್ಯಮಂತ್ರಿ. ಅದಕ್ಕೇನೆ ಬಿಜೆಪಿ ಸರ್ಕಾರ ಟ್ಯಾರ್ಗೆಟ್ ಮಾಡುತ್ತಿದೆ ಎಂದು ಅಶೋಕ್ ಗೆಹ್ಲೋಟ್ ದೂರಿದ್ದಾರೆ.
ಸ್ವತಂತ್ರ ಭಾರತದಲ್ಲಿ ಮೊಟ್ಟ ಮೊದಲ ಬಾರಿಗೆ ಪಂಜಾಬ್ ನಲ್ಲಿ ದಲಿತ ಸಿಎಂ ಆಗಿರೋದು. ಅದನ್ನ ಇಡೀ ದೇಶವೇ ಸ್ವಾಗತಿಸಿದೆ. ಆದರೆ ಇಲ್ಲಿಂದ ತೆರೆಳಿದ ಮೋದಿ ಅವ್ರು,ನಾನು ಬದುಕಿ ಬಂದೆ ಅಂತ ಹೇಳಲೇಬಾರದಿತ್ತು.ಕೆಲವರು ರಾಜಕೀಯ ಲಾಭಕ್ಕೆ ಇದನ್ನ ಬಳಸಿಕೊಂಡು ಕಾಂಗ್ರೆಸ್ ಅನ್ನ ದೂರುತ್ತಿದ್ದಾರೆ ಅಂತಲೇ ಅಶೋಕ್ ಗೆಹ್ಲೋಟ್ ತಿಳಿಸಿದ್ದಾರೆ.
PublicNext
07/01/2022 02:55 pm