ಉತ್ತರಪ್ರದೇಶ: ಪ್ರಧಾನಿ ನರೇಂದ್ರ ಮೋದಿ ಪಂಜಾಬ್ ನಿಂದ ಜೀವಂತವಾಗಿ ವಾಪಸ್ ಬಂದೇ ಅಂತ ಹೇಳಿದ್ದೇ ತಡ. ರಾಜಕೀಯ ವಲಯದಲ್ಲಿ ಬೇರೆ ಬೇರೆ ರೀತಿಯಲ್ಲಿಯೇ ಅದನ್ನ ತೆಗೆದುಕೊಂಡು ಕಾಮೆಂಟ್ ಮಾಡ್ತಿದ್ದಾರೆ. ಆದರೆ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಈಗೊಂದು ಕೆಲಸ ಮಾಡಿದ್ದಾರೆ. ವಾರಾಣಾಸಿಯ ಕಾಲಭೈರವನಿಗೆ ಮತ್ತು ಕಾಶಿ ವಿಶ್ವನಾಥನಿಗೆ ವಿಶೇಷ ಪೂಜೆ ಮಾಡಿದ್ದಾರೆ.
ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವ್ರು ಪ್ರಧಾನಿಯ ಯಶಸ್ವಿ ಪ್ರಧಾನಿಯ ಸುರಕ್ಷತೆಗಾಗಿಯೇ ಪೂಜೆ ಮಾಡಿದ್ದಾರೆ. ಮೋದಿ ಅವ್ರು ಆರೋಗ್ಯದಿಂದ ಸುರಕ್ಷತವಾಗಿರಲೆಂದೇ ಕಾಶಿ ವಿಶ್ವನಾಥನಿಗೆ ಮತ್ತು ಕಾಲಭೈರವನಿಗೆ ಯೋಗಿ ಆದಿತ್ಯನಾಥ್ ಪೂಜೆ ಸಲ್ಲಿಸಿದ್ದಾರೆ. ಪೂಜೆ ವೇಳೆ ಚಿತ್ರೀಕರಿಸಿದ ವೀಡಿಯೋವನ್ನೂ ತಮ್ಮ ಟ್ವಿಟರ್ ಪೇಜ್ ನಲ್ಲೂ ಶೇರ್ ಮಾಡಿ ತಮ್ಮ ಪೂಜೆಯ ಉದ್ದೇಶವನ್ನೂ ಹೇಳಿಕೊಂಡಿದ್ದಾರೆ.
PublicNext
07/01/2022 01:41 pm