ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಪಂಜಾಬ್ ಭೇಟಿ ವೇಳೆ ನಡೆದ ಭದ್ರತಾ ಲೋಪ ವಿಚಾರವಾಗಿ ಬಿಜೆಪಿ ನಾಯಕರು ಪಂಜಾಬ್ ಸರ್ಕಾರದ ಮೇಲೆ ನಿರಂತರ ಟೀಕಾ ಪ್ರಹಾರ ನಡೆಸಿದ್ದಾರೆ. ಈ ಬಗ್ಗೆ ಟ್ವೀಟ್ ಮೂಲಕ ಪ್ರತಿಕ್ರಿಯೆ ನೀಡಿರುವ ಕೆಪಿಸಿಸಿ, ತಮಗೆ ಎದುರಾದ ಜನವಿರೋಧವನ್ನು ಮರೆಮಾಚಲು ಪ್ರಧಾನಿ ಮೋದಿ ಅವರು ಭದ್ರತಾ ವೈಫಲ್ಯ ಎಂಬ ಸಬೂಬು ಹೇಳುತ್ತಿದ್ದಾರೆ ಎಂದಿದೆ.
"ದಲಿತರೊಬ್ಬರು ಮುಖ್ಯಮಂತ್ರಿ ಹುದ್ದೆಗೆ ಏರಿದ್ದನ್ನು ಬಿಜೆಪಿಗೆ ಸಹಿಸಲಾಗುತ್ತಿಲ್ಲ. ಜನವಿರೋಧವನ್ನು ಮುಚ್ಚಿಡಲು ಭದ್ರತಾ ವೈಫಲ್ಯ ಎಂಬ ಕಾರಣ ನೀಡುವ ಮೂಲಕ ಪ್ರಧಾನಿ ಮೋದಿಯವರು ಪಂಜಾಬಿನ ದಲಿತ ಸಿಎಂ ಮೇಲೆ ಗೂಬೆ ಕೂರಿಸುತ್ತಿದ್ದಾರೆ. ಮನುವಾದವನ್ನು ಒಪ್ಪಿ ಅಪ್ಪಿ ಮುದ್ದಾಡುತ್ತಿರುವ ಪ್ರಧಾನಿಗೆ ದಲಿತರೆಂದರೆ ಅಸಹನೆ" ಎಂದು ಟ್ವೀಟ್ ಮಾಡಿರುವ ಕೆಪಿಸಿಸಿ 'ದಲಿತ ವಿರೋಧಿ ಮೋದಿ' ಎಂದು ಹ್ಯಾಷ್ ಟ್ಯಾಗ್ ಮಾಡಿದೆ.
PublicNext
07/01/2022 08:15 am