ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಭದ್ರತಾ ಲೋಪದ ಗಿಮಿಕ್ ಮೂಲಕ ನಮ್ಮ ಸರ್ಕಾರ ಬೀಳಿಸುವ ಹುನ್ನಾರ ನಡಿದಿದೆ: ಪಂಜಾಬ್ ಸಿಎಂ

ಅಮೃತಸರ: ಪ್ರಧಾನಿ ನರೇಂದ್ರ ಮೋದಿ ಪಂಜಾಬ್ ಭೇಟಿ ವೇಳೆ ನಡೆದ ಭದ್ರತಾ ಲೋಪವನ್ನು ಮುಂದಿಟ್ಟುಕೊಂಡು ನಮ್ಮ ಸರ್ಕಾರವನ್ನು ಬೀಳಿಸುವ ಹುನ್ನಾರ ನಡೆದಿದೆ. ನರೇಂದ್ರ ಮೋದಿ ಅವರಿಗೆ ಯಾವುದೇ ಜೀವ ಬೆದರಿಕೆ ಇಲ್ಲ ಎಂದು ಪಂಜಾಬ್ ಸಿಎಂ ಚರಣ್‌ಜಿತ್ ಸಿಂಗ್ ಚನ್ನಿ ಹೇಳಿದ್ದಾರೆ.

ಪ್ರಧಾನಿಯವರ ಬೆಂಗಾವಲು ಪಡೆ ಎಲ್ಲಿ ನಿಂತಿತ್ತೋ ಅಲ್ಲಿ ಘೋಷಣೆ ಕೂಡ ಕೂಗಿಲ್ಲ. ಯಾವುದೇ ಕಲ್ಲು ತೂರಿಲ್ಲ ಅಥವಾ ಯಾರೂ ಅವರನ್ನು ತಲುಪಿಲ್ಲ, ಅವರ ಜೀವಕ್ಕೆ ಹೇಗೆ ಅಪಾಯವಿದೆ? ಪ್ರಧಾನಿ ಮೋದಿ ಇದ್ದ ಜಾಗದಿಂದ ಪ್ರತಿಭಟನಾಕಾರರು ಒಂದು ಕಿಲೋಮೀಟರ್ ದೂರದಲ್ಲಿದ್ದರು. ಹೀಗಿರಬೇಕಾದ್ರೆ ಪ್ರಧಾನಿಗೆ ಜೀವ ಬೆದರಿಕೆ ಬರಲು ಹೇಗೆ ಸಾಧ್ಯ? ಎಂದು ಸಿಎಂ ಚನ್ನಿ ಪ್ರಶ್ನೆ ಮಾಡಿದ್ದಾರೆ.

ಫಿರೋಜ್‌ಪುರದಲ್ಲಿ ಪ್ರಧಾನಿ ಬೆಂಗಾವಲು ಪಡೆ ಎದುರು ರಸ್ತೆಗಿಳಿದು ಪ್ರತಿಭಟನೆ ನಡೆಸುತ್ತಿದ್ದ ರೈತರ ಮೇಲೆ ತಮ್ಮ ಪೊಲೀಸರು ಬಲಪ್ರಯೋಗ ಮಾಡಿದ್ದರೆ ಅದು ಮತ್ತೊಂದು ಬಾರ್ಗಾದಿಯಂತಹ ಘಟನೆಯಾಗುತ್ತಿತ್ತು ಎಂದು ಹೋಶಿಯಾರ್‌ಪುರದಲ್ಲಿ ಚರಂಜಿತ್ ಸಿಂಗ್ ಚನ್ನಿ ಹೇಳಿದ್ದಾರೆ. ಹೀಗೆ ಮಾಡಿದ್ದರೆ ಆಗ ಬಾದಲ್ ಮತ್ತು ನಮಗೂ ಯಾವುದೇ ವ್ಯತ್ಯಾಸವಿಲ್ಲ ಎಂದರು.

Edited By : Nagaraj Tulugeri
PublicNext

PublicNext

07/01/2022 07:28 am

Cinque Terre

40.3 K

Cinque Terre

14

ಸಂಬಂಧಿತ ಸುದ್ದಿ