ಕೋಲಾರ: ಮೇಕೆದಾಟು ಯೋಜನೆಗಾಗಿ ಪಾದಯಾತ್ರೆ ಮಾಡಲು ಮುಂದಾಗಿರುವ ಕಾಂಗ್ರೆಸ್‌ಗೆ ಯಾವುದೇ ನೈತಿಕತೆ ಇಲ್ಲ. ನೈತಿಕತೆ ಇದ್ದಿದ್ದೇ ಆದಲ್ಲಿ ಅವರ ಸರ್ಕಾರ ಇದ್ದಾಗಲೇ ಯೋಜನೆ ಜಾರಿಗೊಳಿಸಬೇಕಿತ್ತು. ಈ ವಿಚಾರದಲ್ಲಿ ಎರಡೂ ರಾಜಕೀಯ ಪಕ್ಷಗಳು ಕೇವಲ ರಾಜಕೀಯ ಮಾಡುತ್ತಿವೆ ಎಂದು ರಾಜ್ಯ ರೈತ ಸಂಘದ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಹೇಳಿದ್ದಾರೆ.
ಕೋಲಾರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮೇಕೆದಾಟು ವಿಚಾರದಲ್ಲಿ ಸದ್ಯ ರಾಜಕೀಯ ನಡೆಯುತ್ತಿದೆ. ಎರಡು ಪಕ್ಷಗಳು ಈ ವಿಚಾರದಲ್ಲಿ ರಾಜಕೀಯ ಮಾಡುತ್ತಿದ್ದಾರೆ. ಮೇಕೆದಾಟು ಪಾದಯಾತ್ರೆ ಅದೊಂದು ರಾಜಕೀಯ ಕಾರ್ಯಕ್ರಮ. ಪಾದಯಾತ್ರೆಯನ್ನು ಸಿದ್ದರಾಮಯ್ಯರೇ ಮಾಡಲಿ. ಡಿ.ಕೆ ಶಿವಕುಮಾರ್ ಮಾಡಲಿ. ಯಾರೇ ಮಾಡಲಿದರೂ ಕೋವಿಡ್ ನೀತಿ ನಿಯಮಗಳನ್ನು ಪಾಲನೆ ಮಾಡಬೇಕು. ಮೇಕೆದಾಟು ಪಾದಯಾತ್ರೆಗೆ ನನ್ನನ್ನು ಆಹ್ವಾನ ಮಾಡಿದ್ದರು. ಆದರೆ ಅದೊಂದು ರಾಜಕೀಯ ಪಕ್ಷದ ಅಜೆಂಡಾ ಎಂದು ಹೇಳಿದ್ದಾರೆ.
PublicNext
06/01/2022 05:30 pm