ತುಮಕೂರು: 'ಆತ ಕೆಟ್ಟ ಸೂ..ಮಗ ನಮ್ಮ ಜಿಲ್ಲೆ ಹಾಳು ಮಾಡಿದ್ದಾನೆ. ಮಾತೆತ್ತಿದರೆ ಹೊಡಿ ಬಡಿ ಕಡಿ ಅಂತಾನೆ'
ಹೀಗಂತಾ ಪರೋಕ್ಷವಾಗಿ ಸಚಿವ ಮಾಧುಸ್ವಾಮಿ ಬಗ್ಗೆ ಸಂಸದ ಜಿ.ಎಸ್ ಬಸವರಾಜ್ ಹಾಗೂ ಸಚಿವ ಭೈರತಿ ಬಸವರಾಜ್ ಗುಸುಗುಸು ಮಾತಾಡಿಕೊಂಡಿದ್ದಾರೆ. ಅದರ ವಿಡಿಯೊ ಮಾಧ್ಯಮಗಳ ಕ್ಯಾಮೆರಾಗಳಲ್ಲಿ ದಾಖಲಾಗಿದೆ. ತುಮಕೂರು ಮಹಾನಗರ ಪಾಲಿಕೆಯಲ್ಲಿ ಇಂದು ನಡೆದ ಸುದ್ದಿಗೋಷ್ಠಿಯಲ್ಲಿ ಈ ಗುಸುಗುಸು ಮಾತುಕತೆ ನಡೆದಿದೆ.
ಪರೋಕ್ಷವಾಗಿ ಬೈರತಿ ಬಸವರಾಜು ಅವರೊಂದಿಗೆ ಪಿಸುಮಾತಿನಲ್ಲಿ ತೊಡಗಿದ್ದ ಸಂಸದ ಬಸವರಾಜು, ಸಚಿವ ಮಾಧುಸ್ವಾಮಿ ವಿರುದ್ಧ ಹಲವು ಆರೋಪ ಮಾಡಿದ್ದಾರೆ. ಈ ನನ್ನ ಮಗ ನಮ್ಮ ಮಂತ್ರಿ ಹೇಂಗೆ ಗೊತ್ತಾ? ದಕ್ಷಿಣ ಕೋರಿಯಾದ ಕಿಂಗ್ ಪಿನ್ ಇದಾನಲ್ಲ... ಕೆಟ್ಟ ಸುಳೇ ಮಗ. ಹಾಳು ಮಾಡಿಬಿಟ್ಟಿದ್ದಾನೆ ನಮ್ಮ ಜಿಲ್ಲೆಯನ್ನ. ಒಂದು ಸೀಟ್ ಬರಲ್ಲ. ಮಾತು ಎತ್ತಿದರೆ ಹೊಡಿ ಬಡಿ ಕಡಿ ಅಂತಾನೆ. ಅನವ್ಯಾರೋ ಇಂಜಿನಿಯರ್‌ಗೆ ಹೇಳ್ತಾನೆ 'ಹೆಂಡ್ತಿ ಸೀರೆ ಹೊಗೊಯೋಕೆ ಲಾಯಕ್ ನೀನು' ಅಂತ. ಒಂದು ಹ್ಯಾಂಡ್ ಬಿಲ್ ಪ್ರಿಂಟ್ ಮಾಡಿಸಲ್ಲ. ಮೊನ್ನೆ ಸಾವಿರ ಕೋಟಿ ಡಿಕ್ಲೈರ್ ಮಾಡಿಕೊಂಡು ಬಂದವನೇ. ನಮಗೆ ಯಾರಿಗೂ ಇನ್ವಿಟೇಶನ್ ಇಲ್ಲ. ಕರೆಯೋದೂ ಇಲ್ಲ. ನಿಮ್ಮ ಇಲಾಖೆಗೆ ಬಂದು ಹೇಳಿದರೇ ತಲೆಕೆಡಿಸಕೊಳ್ಳಬೇಡ ಎಂದು ಮಾತಾಡಿಕೊಂಡಿರುವುದು ವಿಡಿಯೋದಲ್ಲಿ ಸ್ಪಷ್ಟವಾಗಿ ಕೇಳಿಸಿದೆ.
ಇಷ್ಟೆಲ್ಲ ಗುಸುಗುಸು ಮಾತುಕತೆಯಾದ ಮೇಲೆ ಸುಮ್ನಿರು ಆಮೇಲೆ ಮಾತಾಡೋಣ ಎಂದ ಸಚಿವ ಬೈರತಿ ಬಸವರಾಜ್ ಪತ್ರಿಕಾಗೋಷ್ಠಿ ಆರಂಭಿಸಿದ್ದಾರೆ.
PublicNext
06/01/2022 01:50 pm