ದೆಹಲಿ: ಪಂಜಾಬ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ ಭ್ರದತೆಯಲ್ಲಿ ಲೋಪ ಆಗಿದ್ದೇ ತಡ. ಕೇಂದ್ರ ಸಚಿವೆ ಸ್ಮೃತಿ ಇರಾನಿ ದೆಹಲಿಯಲ್ಲಿ ಪತ್ರಿಕಾಗೋಷ್ಠಿ ಮಾಡಿ ಪಂಜಾಬ್ ಸರ್ಕಾರದ ವಿರುದ್ಧ ಕೆಂಡಾಮಂಡಲವಾಗಿದ್ದಾರೆ.
ಕಾಂಗ್ರೆಸ್ ಪಕ್ಷ ಪ್ರಧಾನಿ ನರೇಂದ್ರ ಮೋದಿಯವನ್ನ ದ್ವೇಷಿಸುತ್ತದೆ. ಪಂಜಾಬ್ ನಲ್ಲಿ ಅದಕ್ಕೆ ಸಾಕ್ಷಿ ಈ ಭದ್ರತಾ ಲೋಪವೇ ಆಗಿದೆ. ಪ್ರಧಾನಿಗೆ ಹಾನಿ ಮಾಡುವ ಉದ್ದೇಶದಿಂದಲೇ ಈ ಕೆಲಸ ಮಾಡಲಾಗಿದೆ ಅಂತಲೇ ಸಚಿವೆ ಸ್ಮೃತಿ ಇರಾನಿ ಆರೋಪಿಸಿದ್ದಾರೆ.
ಪ್ರಧಾನಿ ಮೋದಿ ಪ್ರಯಾಣ ಮಾಡಲಿರೋ ಮಾರ್ಗದ ಸೋರಿಕೆ ಆಗಿದೆ. ಪ್ರತಿಭಟನಾಕಾರರು ಅದೇ ಮಾರ್ಗದಲ್ಲಿ ಹೇಗೆ ಬರಲು ಸಾಧ್ಯ.ಪೊಲೀಸರು ಪ್ರತಿಭಟನಾಕಾರರನ್ನ ಪ್ರೇರೇಪಿಸಿದ್ದಾರೆ. ಇಂದಿನ ಭದ್ರತಾಲೋಪಕ್ಕೆ ನೇರವಾಗಿ ಪಂಜಾಬ್ ಸರ್ಕಾರವೇ ಕಾರಣ ಅಂತಲೂ ದೂರಿದ್ದಾರೆ ಸ್ಮೃತಿ ಇರಾನಿ.
PublicNext
05/01/2022 05:51 pm