ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಗ್ರಾಮೀಣ ಪತ್ರಕರ್ತರ ಆರೋಗ್ಯ ಕಾರ್ಡು ಬಸ್‌ಪಾಸ್ ಸೌಲಭ್ಯಗಳಿಗೆ ಬಜೆಟ್‌ನಲ್ಲಿ ಆದ್ಯತೆ:ಬೊಮ್ಮಾಯಿ

ಕಲಬುರಗಿ: ಸಣ್ಣ ಪತ್ರಿಕೆಗಳು ಪ್ರಸಾರದಲ್ಲಿ ಕಡಿಮೆ ಸಂಖ್ಯೆ ಹೊಂದಿದ್ದರೂ ಕೂಡ ಅಲ್ಲಿನ ಸುದ್ದಿ, ಲೇಖನ, ಅಂಕಣಗಳ ಮೌಲ್ಯ ದೊಡ್ಡದು. ಗ್ರಾಮೀಣ ಪತ್ರಕರ್ತರಿಗೆ ಆರೋಗ್ಯ ಕಾರ್ಡು, ಬಸ್‌ಪಾಸ್ ಸೇರಿದಂತೆ ಇತರ ಸೌಲಭ್ಯಗಳಿಗೆ ಬರುವ ಬಜೆಟ್‌‌ನಲ್ಲಿ ಆದ್ಯತೆ ನೀಡಲಾಗುವುದು. ಕಲ್ಯಾಣ ಕರ್ನಾಟಕದ ಅಭಿವೃದ್ಧಿ ಮಂಡಳಿ ಹಾಗೂ ಕೋಶಕ್ಕೆ ವಾರಾಂತ್ಯದೊಳಗೆ ಪೂರ್ಣ ನೇಮಕಾತಿ ಮಾಡಿ 3 ಸಾವಿರ ಕೋಟಿ ರೂ.ಕ್ರಿಯಾ ಯೋಜನೆಯನ್ನು ಒಂದು ವರ್ಷದ ಅವಧಿಯೊಳಗೆ ಅನುಷ್ಠಾನ ಮಾಡಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘವು ಇಲ್ಲಿನ ಬಸವರಾಜಪ್ಪ ಅಪ್ಪ ಸ್ಮಾರಕ ಭವನದಲ್ಲಿ ಏರ್ಪಡಿಸಿರುವ 36 ನೇ ರಾಜ್ಯ ಪತ್ರಕರ್ತರ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದರು.

ಪತ್ರಿಕಾ ರಂಗ ಹಲವಾರು ಸವಾಲುಗಳನ್ನು ಎದುರಿಸುತ್ತಿದೆ.ಖಾಸಗೀಕರಣ,ಉದಾರೀಕರಣ,ಜಾಗತೀಕರಣದ ಮಾರುಕಟ್ಟೆ ಆಧಾರಿತ ವ್ಯವಹಾರದ ನಡುವೆ ಜನಪರ ಆದ್ಯತೆಗಳನ್ನು,ಅಂತಃಕರಣವನ್ನು ಪತ್ರಿಕೆಗಳು ಕಾಯ್ದುಕೊಳ್ಳುತ್ತಿವೆ. ಪತ್ರಿಕೆಗಳಿಗೆ ಅಗತ್ಯವಿರುವ ಜಾಹೀರಾತು ,ಗ್ರಾಮೀಣ ಪತ್ರಕರ್ತರಿಗೆ ಆರೋಗ್ಯ ಕಾರ್ಡು,ಬಸ್‌ಪಾಸ್ ಸೌಕರ್ಯಗಳನ್ನು ನೀಡಲು ಬರುವ ಬಜೆಟ್‌ನಲ್ಲಿ ಕ್ರಮವಹಿಸಲಾಗುವುದು. ಕಲ್ಯಾಣ ಕರ್ನಾಟಕದ ಅಭಿವೃದ್ಧಿಗೆ 3 ಸಾವಿರ ಕೋಟಿ ರೂ.ಗಳ ಕ್ರಿಯಾ ಯೋಜನೆ ತಯಾರಿಸಲಾಗಿದೆ. ತಿಂಗಳಾಂತ್ಯದೊಳಗೆ ಈ ಭಾಗದ ಶಾಸಕರ ಸಭೆ ನಡೆಸಿ ಅಂತಿಮಗೊಳಿಸಲಾಗುವುದು.ಅನುದಾನ ಒದಗಿಸಿ ಒಂದೇ ವರ್ಷದಲ್ಲಿ ಯೋಜನೆಗಳ ಅನುಷ್ಠಾನ ಮಾಡಲಾಗುವುದು‌ ಎಂದರು.

Edited By : Nirmala Aralikatti
PublicNext

PublicNext

04/01/2022 04:08 pm

Cinque Terre

48.85 K

Cinque Terre

0

ಸಂಬಂಧಿತ ಸುದ್ದಿ