ಹಾವೇರಿ: ಸಂಸದ ಡಿ.ಕೆ ಸುರೇಶ್ ವಿರುದ್ಧ ನಗರದ ಸಿದ್ದಪ್ಪ ವೃತ್ತದಲ್ಲಿ ರಸ್ತೆ ತಡೆದು ಬಿಜೆಪಿಯಿಂದ ಪ್ರತಿಭಟನೆ ನಡೆಸಲಾಯಿತು. ಪ್ರತಿಭಟನೆಯಲ್ಲಿ ಬಿಜೆಪಿ ಕಾರ್ಯಕರ್ತರು ಧಿಕ್ಕಾರ ಕೂಗಿ ಆಕ್ರೋಶ ಹೊರಹಾಕಿದ್ದಾರೆ.
ಶಾಸಕ ನೆಹರು ಓಲೇಕಾರ ನೇತೃತ್ವದಲ್ಲಿ ಪ್ರತಿಭಟನೆ ನಡೆಯುತ್ತಿದ್ದು ನಿನ್ನೆ ರಾಮನಗರದಲ್ಲಿ ನಡೆದ ಘಟನೆ ವಿರೋಧಿಸಿ ಡಿಕೆ ಸುರೇಶ್ ಪ್ರತಿಕೃತಿಗೆ ಬೆಂಕಿ ಹಚ್ಚಿ ಆಕ್ರೋಶ ಹೊರಹಾಕಿದ್ದಾರೆ. ಸಂಸದ ಡಿಕೆಎಸ್ ಹಾಗೂ ಸಚಿವ ಅಶ್ವತ್ ನಾರಾಯಣ ಮಧ್ಯೆ ನಡೆದಿದ್ದ ಗುಂಡಾವರ್ತನೆ ಖಂಡಿಸಿ ಕೊತ್ವಾಲ್ ರೀತಿ ವರ್ತಿಸುತ್ತಿರುವ ಡಿಕೆ ಸುರೇಶ್ ಫೋಟೋ ಹಿಡಿದು ಪ್ರತಿಭಟನೆ ನಡೆಸಿದರು .ಅಧಿಕಾರ ಸಿಗದೆ ಹೀಗೆ ಎಲ್ಲೆ ಮೀರಿ ರೌಡಿಗಳ ಥರ ನಡೆದುಕೊಳ್ತಾ ಇದ್ದಾರೆ ಕಾಂಗ್ರೆಸ್ ಮುಖಂಡರಿಗೆ ಪಾಠ ಕಲಿಸಬೇಕು ಹಾಗೂ ಡಿಕೆ ಸುರೇಶ್ ರಾಜೀನಾಮೆ ಕೊಡಬೇಕು ಎಂದು ಶಾಸಕ ನೆಹರು ಆಗ್ರಹಿಸಿದ್ದಾರೆ.
PublicNext
04/01/2022 12:59 pm